ಮರ್ಕಝುಲ್ ಹುದಾ ಬುರೈದಾ ಸಮಿತಿ: ಸಯ್ಯದ್, ಇಸ್ಮಾಯಿಲ್, ಝಕರಿಯಾ ಪುನರಾಯ್ಕೆ
ಪುತ್ತೂರು- ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಸೌದಿ ಅರೇಬಿಯಾ ಬುರೈದಾ ಘಟಕದ ವಾರ್ಷಿಕ ಮಹಾಸಭೆಯು ಬುರೈದಾ, ಇಸ್ತಿರಾಹ ರೌಳಾ ಸಭಾಂಗಣದಲ್ಲಿ ನಡೆಯಿತು.
ಮರ್ಕಝುಲ್ ಹುದಾ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ನೇತೃತ್ವ ನೀಡಿದರು.ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ನೌಶಾದ್ ಪೋಲ್ಯ, ಕಾರ್ಯದರ್ಶಿ ಶಂಸುದ್ದೀನ್ ಬೈರಿಕಟ್ಟೆ ಆಯ್ಕೆ ಪ್ರಕ್ರಿಯೆಗೆ ಮುಂದಾಳತ್ವ ವಹಿಸಿದರು.
ಸಮಿತಿಯ ಅಧ್ಯಕ್ಷರಾಗಿ ಸಯ್ಯದ್ ವೈ.ಎಂ.ಕೆ.ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಆನಡ್ಕ ಹಾಗೂ ಕೋಶಾಧಿಕಾರಿಯಾಗಿ ಝಕರಿಯಾ ಕೊರಿಂಗಿಲ ಅವರನ್ನು ಪುನರಾಯ್ಕೆ ಮಾಡಲಾಯಿತು
ಗೌರವಾಧ್ಯಕ್ಷರಾಗಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ ಹಾಗೂ
ಸಲಹೆಗಾರರಾಗಿ ಅಬ್ಬಾಸ್ ಅಲಿ ಕುಕ್ಕುವಳ್ಳಿ,ಅಬ್ದುಲ್ ಖಾದರ್ ಕನ್ನಂಗಾರ್,ಅಬ್ದುಲ್ ರಝಾಖ್ ನೆಕ್ಕಿಲ್
ಅವರನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ ಇರ್ಶಾದ್ ಸಚ್ಚೇರಿಪೇಟೆ, ಅಬ್ದುಲ್ಲಾ ಕೊಯ್ಲಾ, ಜತೆ ಕಾರ್ಯದರ್ಶಿಯಾಗಿ ಬಶೀರ್ ಕನ್ಯಾನ, ಸಂಚಾಲಕರಾಗಿ ಅಬ್ದುಲ್ಲತೀಫ್ ಶೇರಿ,ತಾಜುದ್ದೀನ್ ಉಪ್ಪಿನಂಗಡಿ ಹಾಗೂ ಕಾರ್ಯಕಾರಿ ಸದಸ್ಯರಾಗಿ ಅಶ್ರಫ್ ಬುಳ್ಳೇರಿಕಟ್ಟೆ, ಇಬ್ರಾಹಿಂ ನೆಕ್ಕರೆ,ರಾಶಿದ್ ವೈ.ಎಂ.ಕೆ.,ರಮೀಝ್ ಪಾಲ್ತಾಡ್,ಅಶ್ರಫ್ ನೆಕ್ಕಿಲ್,ಶಂಸುದ್ದೀನ್ ಸರಾವು,ಖಲೀಲ್ ಇರ್ದೆ,ಅವರನ್ನು ಆರಿಸಲಾಯಿತು.
ಸಮಾರಂಭದಲ್ಲಿ ಘಟಕದ ಅಧ್ಯಕ್ಷ ಸಯ್ಯದ್ ವೈ.ಎಂ.ಕೆ ಅಧ್ಯಕ್ಷತೆ ವಹಿಸಿ ಕೆಸಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ ಉದ್ಘಾಟಿಸಿದರು.
ರಾಷ್ಟ್ರೀಯ ಸಮಿತಿಯ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ವಿಷಯ ಮಂಡಿಸಿದರು.
ಕೋಶಾಧಿಕಾರಿ ಝಕರಿಯಾ ಕೊರಿಂಗಿಲ ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಆನಡ್ಕ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಹೇಳಿದರು