ಇಂಗ್ಲೆಂಡ್ ಟಿಟ್ವೆಂಟಿ ವಿಶ್ವ ಚಾಂಪಿಯನ್

ಇಂಗ್ಲೆಂಡ್ ಟಿಟ್ವೆಂಟಿ ವಿಶ್ವ ಚಾಂಪಿಯನ್ 

ಮೆ
ಲ್ಬೋರ್ನ್:
 ಇಂಗ್ಲೆಂಡ್ ತಂಡ ಟಿ-20 ವಿಶ್ವಕಪ್​ನನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ಬೌಲರ್​​ಗಳು ತೋರಿದ ಸಂಘಟಿತ ನಿರ್ವಹಣೆಯಿಂದಾಗಿ ಪಾಕಿಸ್ತಾನ ಅಲ್ಪ ಮೊತ್ತಕ್ಕೆ ಕುಸಿಯಿತು.

138 ರನ್​ಗಳ ಸಾಧಾರಣ ಮೊತ್ತ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿತು. ತಂಡದ ಮೊತ್ತ 7 ರನ್​ಗಳಾಗಿದ್ದಾಗ ಆರಂಭಿಕ ಬ್ಯಾಟ್ಸ್​​ಮನ್ ಅಲೆಕ್ಸ್​ ಹೇಲ್ಸ್​​ 1 ರನ್​ಗಳಿಸಿ ಶಾಹಿನ್ ಅಫ್ರಿದಿ ಎಸೆತದಲ್ಲಿ ಬೌಲ್ಡ್ ಆದರು. ನಂತರ ಬಂದ ಫಿಲ್ ಸಾಲ್ಟ್​ 7 ರನ್​ಗಳಿಸಿ ಹ್ಯಾರಿಸ್ ರೌಫ್​ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಈ ವೇಳೆ ತಂಡವನ್ನು ಆಧರಿಸಿದ ನಾಯಕ ಜೋಸ್​ ಬಟ್ಲರ್ ನಿಧಾನವಾಗಿ ಬಿರುಸಿನ ಆಟಕ್ಕೆ ಮುಂದಾದರು. ಆದರೆ ಇದಕ್ಕೆ ಅವಕಾಶ ಮಾಡಿಕೊಡದ ಹ್ಯಾರಿಸ್ ರೌಫ್ ಬಟ್ಲರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 26 ರನ್​ಗಳಿಸಿದ್ದ ವೇಳೆ ಬಟ್ಲರ್ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು.

ಬಟ್ಲರ್ ಔಟ್ ಆಗುತ್ತಿದ್ದಂತೆ ಬೆನ್ ಸ್ಟೋಕ್ಸ್ ಜತೆಯಾದ ಹ್ಯಾರಿ ಬ್ರುಕ್ ನಿಧಾನವಾಗಿ ಇನ್ನಿಂಗ್ಸ್​ ಕಟ್ಟಲು ಮುಂದಾದರು. ಇವರ ಆಟ 20 ರನ್​ ಗಳಿಸಿ ಅಂತ್ಯವಾಯಿತು.

ಪಾಕಿಸ್ತಾನದ ಬೌಲಿಂಗ್ ದಾಳಿ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳಿಗೆ ಸವಾಲಾಗಿ ಪರಿಣಮಿಸಿತು. ಈ ವೇಳೆ ಆಲ್​ರೌಂಡರ್ ಬೆನ್​​ಸ್ಟೋಕ್ಸ್ ಜವಾಬ್ದಾರಿಯುತ ಇನ್ನಿಂಗ್ಸ್​​ ಕಟ್ಟಿ ತಂಡವನ್ನು ಗೆಲುವಿನ ದಡ ದಾಟಿಸಿದರು.

Previous Post Next Post