ಮರ್ಕಝುಲ್ ಹುದಾ ಜಿದ್ದಾ ಸಮಿತಿ: ಮುಹಮ್ಮದ್ ಹಾಜಿ ಕಲ್ಲರ್ಬೆ, ಶಂಸುದ್ದೀನ್ ಮಡಂತ್ಯಾರ್, ಅಶ್ರಫ್ ಕಕ್ಕಿಂಜೆ ಸಾರಥಿಗಳು

ಮರ್ಕಝುಲ್ ಹುದಾ ಜಿದ್ದಾ ಸಮಿತಿ: ಮುಹಮ್ಮದ್ ಹಾಜಿ ಕಲ್ಲರ್ಬೆ, ಶಂಸುದ್ದೀನ್ ಮಡಂತ್ಯಾರ್, ಅಶ್‌ರಫ್ ಕಕ್ಕಿಂಜೆ ಸಾರಥಿಗಳು
ಪುತ್ತೂರು-ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾದ ಜಿದ್ದಾ ಘಟಕದ ಮಹಾಸಭೆಯು ಜಿದ್ದಾ, ಅಝೀಝಿಯಾ, ಕಲ್ಲರ್ಬೆ ವಿಲ್ಲಾದಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ಅವರ ನೇತೃತ್ವದಲ್ಲಿ ನಡದು ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಗೌರವಾಧ್ಯಕ್ಷರಾಗಿ ಸಯ್ಯಿದ್ ಮುಹಮ್ಮದ್ ತಂಙಳ್ ಅಲ್ ಬುಖಾರಿ ಉಚ್ಚಿಲ, ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಕಲ್ಲರ್ಬೆ,ಪ್ರಧಾನ ಕಾರ್ಯದರ್ಶಿಯಾಗಿ ಶಂಸುದ್ದೀನ್ ಮಡಂತ್ಯಾರ್, ಕೋಶಾಧಿಕಾರಿಯಾಗಿ ಎಮ್ಮೆಸ್ಸೆಂ. ಅಶ್‌ರಫ್ ಕಕ್ಕಿಂಜೆ, ಉಪಾಧ್ಯಕ್ಷರಾಗಿ ಸಯ್ಯಿದ್ ಮುಹಮ್ಮದ್ ನಾಫಿಅ್ ತಂಙಳ್ ಸುಲ್ತಾನಿ,ಝುಹ್ರಿ, ಅಲ್ ಹಾದಿ ಮೋಂತಿಮಾರ್, ಸುಲೈಮಾನ್ ಸ‌ಅದಿ ಸೋಮವಾರಪೇಟೆ,ಫಾರೂಖ್ ಕಾಟಿಪಳ್ಳ, ಕಾರ್ಯದರ್ಶಿಗಳಾಗಿ ನಾಸಿರ್ ಹೆಚ್ಕಲ್,ಅಬ್ದುಲ್ ರಹ್ಮಾನ್ ಗಂಟಾಲ್ಕಟ್ಟೆ, ಶರೀಫ್ ಪಳ್ಳತ್ತಾರ್ ಇವರನ್ನು ಆರಿಸಲಾಯಿತು.
ಸಲಹಾ ಸಮಿತಿಯ ಸದಸ್ಯರಾಗಿ ಸಯ್ಯಿದ್ ಅಬ್ದುಲ್ ರಹ್ಮಾನ್  ತಂಙಳ್ ಉಚ್ಚಿಲ,ಫಾರೂಖ್ ಸ‌ಅದಿ ಹೆಚ್ಕಲ್, ಡಿಕೆ ಅಬ್ದುಲ್ಲತೀಫ್ ಹಾಜಿ ಕನ್ಯಾನ,ಇಬ್ರಾಹಿಂ ದೇರಳಕಟ್ಟೆ, ಅಬೂಬಕರ್ ಸಿದ್ದೀಖ್ ಹಾಜಿ ಬಾಳೆಹೊನ್ನೂರ್,

ಕಾರ್ಯಕಾರಿ ಸದಸ್ಯರಾಗಿ ಇಸ್ಮಾಯಿಲ್ ಪಡಿಕ್ಕಲ್, ರಫೀಖ್ ಎರ್ಮಾಳ್, ಮನ್ಸೂರ್ ಕಾಟಿಪಳ್ಳ, ಅಶ್‌ರಫ್ ಗಂಟಾಲ್ಕಟ್ಟೆ, ಖಮರುದ್ದೀನ್ ಮಲಾರ್, ಆಸಿಫ್ ಕೋಟ,ಅಬ್ದುಲ್ ಮಜೀದ್ ಕೊಡಗು,ಶಬೀರ್ ಅರಸಿನಮಕ್ಕಿ,ಅಬ್ದುಸ್ಸಮದ್ ಪಕ್ಷಿಕೆರೆ, ಯೂಸುಫ್ ತಲಪಾಡಿ,ಹಮೀದ್ ಪರಪ್ಪು,ಫಾರೂಖ್ ಬಂಟ್ವಾಳ ಇವರನ್ನು ಆರಿಸಲಾಯಿತು.

ಸಭೆಯಲ್ಲಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಕೋಶಾಧಿಕಾರಿ ಮುಹಮ್ಮದ್ ಹಾಜಿ ಕಲ್ಲರ್ಬೆ ಅಧ್ಯಕ್ಷತೆ ವಹಿಸಿದರು. ಮರ್ಕಝುಲ್ ಹುದಾ ರಾಷ್ಟ್ರೀಯ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಉದ್ಘಾಟಿಸಿದರು. ಡಿಕೆಎಸ್ಸಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ವಿಲ, ಸಯ್ಯಿದ್ ಅಬ್ದುಲ್ ರಹ್ಮಾನ್ ತಂಙಳ್ ಉಚ್ಚಿಲ, ಫಾರೂಖ್ ಕಾಟಿಪಳ್ಳ, ಸುಲೈಮಾನ್ ಸ‌ಅದಿ ಕೊಡಗು ಭಾಷಣ ಮಾಡಿದರು
ಸಯ್ಯಿದ್ ಮುಹಮ್ಮದ್ ನಾಫಿಅ್ ತಂಙಳ್ ಪ್ರಾರ್ಥನಾ ಮಜ್‌ಲಿಸ್‌ಗೆ ನೇತೃತ್ವ ಕೊಟ್ಟರು.

ಕೆಸಿಎಫ್ ಜಿದ್ದಾ ಝೋನ್ ಅಧ್ಯಕ್ಷ ಎಮ್ಮೆಸ್ಸೆಂ ಅಶ್‌ರಫ್ ಕಕ್ಕಿಂಜೆ ಸ್ವಾಗತಿಸಿ ಶಂಸುದ್ದೀನ್ ಮಡಂತ್ಯಾರ್ ಧನ್ಯವಾದ ಹೇಳಿದರು.
Previous Post Next Post