ಕೃಷ್ಣಾಪುರ ಜಲೀಲ್ ಹತ್ಯೆ: ಸರಕಾರದ ತಾರತಮ್ಯ ನೀತಿಯ ಪ್ರತಿಫಲನ: ಎಸ್.ವೈ.ಎಸ್
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಡಿದ್ದು ಯಾರು ಏನೇ ಮಾಡಿದರೂ ಕೇಳುವವರೇ ಇಲ್ಲದಂತಾಗಿದೆ. ಅಕ್ರಮ ಅನ್ಯಾಯಗಳನ್ನು ಮಟ್ಟ ಹಾಕುವಲ್ಲಿ ಸರಕಾರಗಳು ತೋರುತ್ತಿರುವ ತಾರತಮ್ಯವೇ ಇಂತಹ ಅನಾಹುತಗಳು ರಾಜ್ಯದಲ್ಲಿ ಮತ್ತೆ ಮತ್ತೆ ಮರುಕಳಿಸಲು ಕಾರಣವೆಂದು ಸುನ್ನೀ ಯುವಜನ ಸಂಘ (ಎಸ್. ವೈ.ಎಸ್.) ರಾಜ್ಯ ಸಮಿತಿ ಅಭಿಪ್ರಾಯ ಪಟ್ಟಿದೆ.
ಕೃಷ್ಣಾಪುರದಲ್ಲಿ ತನ್ನ ಅಂಗಡಿಯೊಳಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಜಲೀಲ್ ಅಮಾಯಕ ವ್ಯಕ್ತಿಯಾಗಿದ್ದು ಸುನ್ನೀ ಯುವಜನ ಸಂಘದ ಕಾರ್ಯಕರ್ತ.ಅವರ ಹತ್ಯೆಯನ್ನು ಎಸ್.ವೈ.ಎಸ್. ತೀವ್ರವಾಗಿ ಖಂಡಿಸುತ್ತಾ ಹಂತಕರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೋಲೀಸ್ ಇಲಾಖೆ ನಿಗಾ ವಹಿಸಬೇಕು.
ಎಸ್.ವೈ.ಎಸ್.ಕಾರ್ಯಕರ್ತನಾದ ಜಲೀಲ್‌ನ ಪಾರತ್ರಿಕ ಮೋಕ್ಷಕ್ಕೆ ಮತ್ತು ಕುಟುಂಬದ ಸಹನೆಗಾಗಿ ಎಲ್ಲರೂ ವಿಶೇಷ ದುಆ ನಡೆಸಬೇಕಾಗಿಯೂ ಮಯ್ಯಿತ್ ನಮಾಝ್ ನಿರ್ವಹಿಸಬೇಕಾಗಿಯೂ
ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.