ನಾಳೆ ಶಿವಮೊಗ್ಗದಲ್ಲಿ ಎಸ್.ವೈ.ಎಸ್.ಜುಬಿಲಿ ಉಧ್ಘಾಟನೆ
ಕರ್ನಾಟಕ ರಾಜ್ಯ ಸುನ್ನೀ ಯುಜನ ಸಂಘದ ಮೂವತ್ತನೇ ವರ್ಷಾಚರಣೆಯ ಉಧ್ಘಾಟನೆ ಹಾಗೂ ರಾಜ್ಯ ಪ್ರತಿನಿಧಿ ಸಂಗಮವು ನಾಳೆ (ಜನವರಿ 24) ಬೆಳಗ್ಗೆ 8 ಗಂಟೆಯಿಂದ ಸಂಜೆ ಆರು ಗಂಟೆಯ ತನಕ ಶಿವಮೊಗ್ಗ ಫಲಕ್ ಪ್ಯಾಲೇಸ್ ಸಭಾಂಗಣದಲ್ಲಿ ಮೌಲಾನಾ ಹೈದರಲಿ ನಿಝಾಮಿ ವೇದಿಕೆಯಲ್ಲಿ ನಡೆಯಲಿದೆ.
ನಿರ್ವಹಣಾ ಸಮಿತಿಯ ಅಧ್ಯಕ್ಷ ಸಯ್ಯಿದ್ ಇಸ್ಮಾಈಲ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶವನ್ನು ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಉಧ್ಘಾಟಿಸುವರು. ಸಯ್ಯಿದ್ ಶಹೀದುದ್ದೀನ್ ಅಲ್ ಬುಖಾರಿ ಪ್ರಾರ್ಥನೆ ನಿರ್ವಹಿಸುವರು.
ವಿವಿಧ ಗೋಷ್ಠಿಗಳಲ್ಲಿ ಕೇರಳ ರಾಜ್ಯ ಎಸ್.ವೈ.ಎಸ್.ಉಪಾಧ್ಯಕ್ಷ ಡಾ. ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ,ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್, ಜಿ.ಎಂ.ಕಾಮಿಲ್ ಸಖಾಫಿ,ಮಾಚಾರ್ ಇಸ್ಮಾಈಲ್ ಸಅದಿ ವಿಷಯ ಮಂಡಿಸುವರು.
ಸಮಾವೇಶದಲ್ಲಿ ಸಂಘಟನೆಯ ಪ್ರಥಮ ಪ್ರಧಾನ ಕಾರ್ಯದರ್ಶಿ 'ಡಾ. ಎಸ್.ಅಬ್ದುರಹ್ಮಾನ್ ಇಂಜಿನಿಯರ್ ಪ್ರಶಸ್ತಿ'ಯನ್ನು ಖ್ಯಾತ ಉದ್ಯಮಿಯೂ ದಾನಿಯೂ ಸುನ್ನೀ ಉಮರಾ ಮುಂದಾಳುವೂ ಆದ ಹಾಜಿ ಎಸ್. ಮುಹಮ್ಮದ್ ಸಾಗರ ಅವರಿಗೆ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ಕರ್ನಾಟಕ ಗೃಹ ಸಚಿವ ಶ್ರೀ ಆರಗ ಜ್ಞಾನೆಂದ್ರ, ಶಿವಮೊಗ್ಗ ಸಂಸದ ಶ್ರೀ ಬಿ.ವೈ.ರಾಘವೇಂದ್ರ,ಕರ್ನಾಟಕ ವಖ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಮುಂತಾದವರು ಮುಖ್ಯ ಅತಿಥಿಗಳಾಗಿರುವರು.
ಸಂಜೆ ಶಿವಮೊಗ್ಗ ಬಸ್ ನಿಲ್ದಾಣದ ತನಕ ಸಾಮರಸ್ಯ ನಡಿಗೆಯೊಂದಿಗೆ ಸಮಾವೇಶ ಕೊನೆಗೊಳ್ಳುವುದು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಒಂದು ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ಎಸ್.ವೈ.ಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ ತಿಳಿಸಿದ್ದಾರೆ.