ಮಂಗಳೂರಿನಲ್ಲಿ 'ಮಸ್‌ನವೀ ಖುರ್‌ಆನಿಕ್ ಸೆಂಟರ್' ಗೆ ಚಾಲನೆ
ಬಹುಮುಖ ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಯೋಜನೆಗಳೊಂದಿಗೆ ರೂಪೀಕರಿಸಲ್ಪಟ್ಟ ಮಸ್‌ನವೀ ಗ್ಲೋಬಲ್ ಅಕಾಡೆಮಿ (ರಿ)ಯ ಖುರಾನೀ ಅಧ್ಯಯನ ಕೇಂದ್ರ 'ಮಸ್‌ನವೀ ಖುರ್‌ಆನಿಕ್ ಸೆಂಟರ್'ಗೆ ಮಂಗಳೂರಿನ ಫಲ್ನೀರ್, ಮತಾಯಸ್ ಬಿಲ್ಡಿಂಗ್‌ನಲ್ಲಿ ಚಾಲನೆ ನೀಡಲಾಯಿತು.
ಅಕಾಡೆಮಿಯ ಅಧ್ಯಕ್ಷ ಸಯ್ಯಿದ್ ಇಸ್ಮಾಈಲ್ ಹಾದಿ ತಂಙಳ್ ಉಜಿರೆ ಸಂಸ್ಥೆಯ ಉಧ್ಘಾಟನೆ ನಿರ್ವಹಿಸಿದರು. ಸೆಂಟರ್ ಎಕ್ಸಿಕ್ಯೂಟೀವ್ ಡೈರೆಕ್ಟರ್ ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್
ಪ್ರಾಸ್ತಾವಿಕ ಮಾತನ್ನಾಡಿದರು.
ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್, ಗ್ರೇಸ್ ಫೌಂಡೇಶನ್, ರಿಸೆರ್ಚ್ ಆಂಡ್ ಪಬ್ಲಿಕೇಶನ್, ಟೀಚರ್ಸ್ ಟ್ರೈನಿಂಗ್, ವಿವಿಧ ಆನ್ಲೈನ್ ಮತ್ತು ಆಫ್ಲೈನ್ ಕೋರ್ಸ್‌ಗಳನ್ನು ಒಳಗೊಂಡ ಅಕಾಡೆಮಿಯು ಮಂಗಳೂರು ನಗರದಲ್ಲಿ ಪ್ರಾರಂಭಿಸಿದ ಮೊದಲ ಕೇಂದ್ರ ಇದಾಗಿದೆ. ಇದರಲ್ಲಿ ಮದ್ರಸಾ, ಆಲಿಮಾ ಕೋರ್ಸ್, ವಾರಾಂತ್ಯ ಕ್ಲಾಸ್, ಗೈಡನ್ಸ್ ಮತ್ತು ಕೌನ್ಸೆಲಿಂಗ್ ಸೆಂಟರ್, ವ್ಯಕ್ತಿತ್ವ ವಿಕಾಸ ಮಾರ್ಗದರ್ಶನ,ಟೀಚರ್ಸ್ ಟ್ರೈನಿಂಗ್, ಹಾಗೂ ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು.
ಕಾರ್ಯಕ್ರಮದಲ್ಲಿ ಮಂಗಳೂರು ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಬಿ.ಎಂ.ಮುಮ್ತಾಝ್ ಅಲಿ, ದ.ಕ.ಜಿಲ್ಲಾ ವಖ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿಸ್ಟಾರ್, ಪ್ರಮುಖ ಉದ್ಯಮಿ ಹಾರಿಸ್ ಮರೈನ್, ಪಿಸಿ.ಗ್ರೂಪ್ ಆಡಳಿತ ನಿರ್ದೇಶಕ ಪಿ.ಸಿ.ಹಾಶಿರ್, ಪ್ರಖ್ಯಾತ ವೈದ್ಯ ಡಾ.ಮೊಯ್ದೀನ್ ನಫ್ಸೀರ್, ಯುವ ಮುಂದಾಳು ಸುಹೈಲ್ ಖಂದಕ್, ಹಿರಿಯರಾದ ಸ್ವಾಲಿಹ್ ಹಾಜಿ, ಅಲ್ ಮರ್ಕಝುಲ್ ಇಸ್ಲಾಮಿ ಅಡ್ಯಾರ್ ಇದರ ಕಾರ್ಯದರ್ಶಿ ಮಲ್ಲೂರು ಅಶ್ರಫ್ ಸಅದಿ, ಉದ್ಯಮಿ ಕೆ.ಎಚ್.ಹಕೀಂ ಕಕ್ಕಿಂಜೆ, ಎಸ್.ವೈ.ಎಸ್.ಮಂಗಳೂರು ಸೆಂಟರ್ ನಾಯಕರಾದ ಸಯ್ಯಿದ್ ಇಸ್‌ಹಾಖ್ ಅಲ್ ಹಾದಿ, ಹಸನ್ ಪಾಂಡೇಶ್ವರ್,ನಝೀರ್ ವಳವೂರು, ಅಬ್ದುರಹ್ಮಾನ್ ಹಾಜಿ ಪ್ರಿಂಟೆಕ್, ಮರ್ಕಝುಲ್ ಹುದಾ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ನೌಶಾದ್ ಅಶ್ರಫ್ ಪೋಲ್ಯ,ಮಂಗಳೂರು ಮಸ್‌ನವೀ ಕನ್ಸಲ್ಟಿಂಗ್ ಕಮಿಟಿ ಕಾರ್ಯದರ್ಶಿ ಸಯ್ಯಿದ್ ಸವಾದ್ ಸಅದಿ ಅಲ್ ಹಾದಿ, ಸಲಹೆಗಾರರಾದ ಮೊಯ್ದೀನ್ ಅಲ್ ಸಫರ್, ಸಲೀಂ ಅಡ್ಯಾರ್, ಮಸ್‌ನವೀ ಗ್ರೇಸ್ ಫೌಂಡೇಶನ್ ಕಾರ್ಯದರ್ಶಿ ಹಾಜಿ ಎಂ.ಎ. ಅಹ್ಮದ್ ಬಾವ, ಫಲ್ನೀರ್ ಖದೀಜಾ ಮಸ್ಜಿದ್ ಉಪಾಧ್ಯಕ್ಷ ಹನೀಫ್ ಹಾಜಿ, ಕಾರ್ಯದರ್ಶಿ ಸ್ವಾಲಿಹ್ ಹಾಜಿ,ಇಮಾಂ ಸಈದ್ ಹಿಮಮಿ ಸಖಾಫಿ, ಶಂಸುದ್ದೀನ್ ಹಿಮಮಿ,
ಮುಂತಾದವರು ಶುಭ ಹಾರೈಸಿದರು. ಹಾಫಿಲ್ ಸುಹೈಲ್ ಮಾಲಿಕ್ ಸುರತ್ಕಲ್ ಖುರ್‌ಆನ್ ಪಠಿಸಿದರು.
ಮಸ್‌ನವೀ ಗ್ಲೋಬಲ್ ಅಕಾಡೆಮಿ ಮ್ಯಾನೇಜರ್ ನೌಫಲ್ ಮದನಿ ನೇಜಾರ್ ಧನ್ಯವಾದ ಸಲ್ಲಿಸಿದರು. ಖುರ್‌ಆನಿಕ್ ಸೆಂಟರ್ ಮ್ಯಾನೇಜರ್ ಕೆ.ಎಂ.ರಶೀದ್ ಬೋಳಾರ್ ಕಾರ್ಯಕ್ರಮ ನಿರೂಪಿಸಿದರು.