ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕುಲದೀಪ್‌ ಕುಮಾರ್‌ ಆರ್. ನೇಮಕ

ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕುಲದೀಪ್‌ ಕುಮಾರ್‌ ಆರ್. ನೇಮಕ


ಮಂಗಳೂರು: ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಅವರನ್ನು ಸರ್ಕಾರ ವರ್ಗಾಯಿಸಿದೆ. ಐಪಿಎಸ್‌ ಅಧಿಕಾರಿ ಕುಲದೀಪ್‌ ಕುಮಾರ್‌ ಆರ್. ಅವರನ್ನು ಮಂಗಳೂರು ಪೊಲೀಸ್ ಕಮಿಷನರ್‌ ಆಗಿ ಗುರುವಾರ ವರ್ಗಾಯಿಸಲಾಗಿದೆ.

ಎನ್‌.ಶಶಿಕುಮಾರ್‌ ಅವರು ರೈಲ್ವೆಸ್‌ನ ಡಿಐಜಿ ಹುದ್ದೆಗೆ ವರ್ಗಾವಣೆಗೊಂಡಿದ್ದಾರೆ. ಶಶಿಕುಮಾರ್‌ ಅವರನ್ನು ಸರ್ಕಾರ 2020 ಡಿ.31ರಂದು ಮಂಗಳೂರಿನ ಪೊಲೀಸ್‌ ಕಮಿಷನರ್‌ ಆಗಿ ನೇಮಿಸಿತ್ತು. ಎರಡು ವರ್ಷಕ್ಕೂ ಹೆಚ್ಚು ಸಮಯ ಅವರು ಈ ಹುದ್ದೆಯಲ್ಲಿದ್ದರು.

ಕುಲದೀಪ್‌ ಅವರು ಬೆಂಗಳೂರು ಸಂಚಾರ ಪಶ್ಚಿಮದ ಡಿಸಿಪಿಯಾಗಿದ್ದರು.

Previous Post Next Post