ಕೇರಳ ಮುಸ್ಲಿಂ ಜಮಾಅತ್- ಎಪಿ ಉಸ್ತಾದ್, ಸಯ್ಯದ್ ಖಲೀಲ್ ಬುಖಾರಿ, ಅಬ್ದುಲ್ ಕರೀಮ್ ಹಾಜಿ ಚಾಲಿಯಂ ಸಾರಥಿಗಳಾಗಿ ಪುನರಾಯ್ಕೆ
ಸುನ್ನೀ ಸಂಘ ಕುಟುಂಬದ ಬಹುಜನ ಸಂಘಟನೆಯಾದ ಕೇರಳ ಮುಸ್ಲಿಂ ಜಮಾ ಅತ್ ಇದರ ಸಾರಥಿಗಳಾಗಿ ಸುಲ್ತಾನುಲ್ ಉಲಮಾ ಕಾತಂಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅಧ್ಯಕ್ಷ ರು ಮತ್ತು ಬದ್ರುಸ್ಸಾದಾತ್ ಖಲೀಲ್ ಬುಖಾರಿ ಪ್ರ. ಕಾರ್ಯದರ್ಶಿಯಾಗಿಯೂ, ಅಬ್ದುಲ್ ಕರೀಮ್ ಹಾಜಿ ಚಾಲಿಯಂ ಖಜಾಂಜಿಯಾಗಿಯೂ ಮತ್ತೊಮ್ಮೆ ಆಯ್ಕೆಯಾದರು.
ಎರಣಾಕುಳಂ ಞಾಲಗಂ ಆಡಿಟೋರಿಯಂ ನಲ್ಲಿ ಇಂದು ವಾರ್ಷಿಕ ಕೌನ್ಸಿಲ್ ನಡೆಯಿತು. ಸಮಸ್ತ ಉಪಾಧ್ಯಕ್ಷರಾದ ಸಯ್ಯದ್ ಆಟಕ್ಕೋಯ ತಙಳ್ ಕುಂಬೋಲ್ ಸಂಘಟನೆಯ ಪುನಾರಚನೆಗೆ ನೇತೃತ್ವ ನೀಡಿದರು. ಸಾರಥಿಗಳನ್ನು ಸಯ್ಯದ್ ಅಲೀ ಬಾಫಕೀ ತಙಳ್ ಘೋಷಿಸಿದರು.
ಉಪಾಧ್ಯಕ್ಷರುಗಳು:
ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್, ಕೆಕೆ ಅಹ್ಮದ್ ಕುಟ್ಟಿ ಮುಸ್ಲಿಯಾರ್ ಕಟಿಪ್ಪಾರ, ಕೆ.ಪಿ.ಅಬೂಬಕರ್ ಮುಸ್ಲಿಯಾರ್ ಪಟ್ಟುವಂ, ಸಿ.ಮುಹಮ್ಮದ್ ಫೈಝಿ ಪನ್ನೂರು, ಅಬ್ದುರ್ರಹ್ಮಾನ್ ಫೈಝಿ ಮಾರಾಯಮಂಗಳಂ, ಬಿ.ಎಸ್.ಅಬ್ದುಲ್ಲಾಕುಂಞಿ ಫೈಝಿ, ಎಂ.ಎನ್.ಕುಂಜಹಮ್ಮದ್ ಹಾಜಿ.
ಕಾರ್ಯದರ್ಶಿಗಳು: ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ವಂಡೂರು ಅಬ್ದುರ್ರಹ್ಮಾನ್ ಫೈಝಿ, ಎನ್ ಅಲಿ ಅಬ್ದುಲ್ಲಾ, ಸಿಪಿ ಸೈದಲವಿ ಮಾಸ್ಟರ್, ಅಬ್ದುಲ್ ಮಜೀದ್ ಕಕ್ಕಾಡ್, ಎ ಸೈಫುದ್ದೀನ್ ಹಾಜಿ ತಿರುವನಂತಪುರ, ಸುಲೈಮಾನ್ ಸಖಾಫಿ ಮಾಳಿಯೇಕಲ್, ಮುಸ್ತಫಾ ಮಾಸ್ಟರ್ ಕೋಡೂರು.
ನಿರ್ದೇಶಕರು: ಪ್ರೊ. ಯು.ಸಿ.ಅಬ್ದುಲ್ ಮಜೀದ್ (ಶಿಕ್ಷಣ), ಕೂಟಂಬರ ಅಬ್ದುರ್ರಹ್ಮಾನ್ ದಾರಿಮಿ (ಪ್ಲಾನಿಂಗ್), ಹಮೀದ್ ಮಾಸ್ಟರ್ ಚೊವ್ವಾ (ತರಬೇತಿ), ಡಬ್ಲ್ಯುಎಚ್ ಅಲಿ ದಾರಿಮಿ (ದಅವಾ)