SჄS ಬೆಂಗಳೂರು ಜಿಲ್ಲೆ: ಜಾಫರ್ ನೂರಾನಿ, ಪಯೋಟ ಸಖಾಫಿ ಪುನರಾಯ್ಕೆ
ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಬೆಂಗಳೂರು ಜಿಲ್ಲಾ ಮಹಾಸಭೆ ಹಾಗೂ ಪುನಾರಚನೆ ಸಮಾವೇಶವು ಶಿವಾಜಿನಗರದ ದಾರುಸ್ಸಲಾಂ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆಯಿತು.ರಾಜ್ಯ ವಖ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಉಧ್ಘಾಟಿಸಿದರು
ಜಿಲ್ಲೆಯ ಪದಾಧಿಕಾರಿಗಳಾಗಿ ಜಾಫರ್ ನೂರಾನಿ ಅಲ್ಸೂರ್ (ಅಧ್ಯಕ್ಷರು) ಇಬ್ರಾಹೀಂ ಸಖಾಫಿ ಪಯೋಟ (ಪ್ರಧಾನ ಕಾರ್ಯದರ್ಶಿ)
ಶರ್ಶಾದ್ ಜಯನಗರ (ಕೋಶಾಧಿಕಾರಿ) ಅನಸ್ ಸಿದ್ದೀಖೀ ಶಿವಾಜಿನಗರ (ಉಪಾಧ್ಯಕ್ಷರು) ಕಾರ್ಯದರ್ಶಿಗಳಾಗಿ ತಾಜುದ್ದೀನ್ ಫಾಳಿಲಿ (ದಅ್‌ವಾ) ಮುನೀರ್ ಕೆ.ಆರ್.ಪುರ (ಸಂಘಟನೆ),
ನಾಸಿರ್ ಕೋರಮಂಗಲ (ಸಾಂತ್ವನ), ರಝಾಖ್ ಜಾಲಿ ಮೆಜೆಸ್ಟಿಕ್ (ಸೋಷಿಯಲ್) ಹಾಶಿಂ ಕೆಂಗೇರಿ (ಕಲ್ಚರಲ್) ಫಿರ್ದೌಸ್ ಮಾರ್ತಳ್ಳಿ (ಇಸಾಬಾ) ಇವರನ್ನು ಆರಿಸಲಾಯಿತು.
ಎಸ್.ವೈ.ಎಸ್.ರಾಜ್ಯ ಸಾಂತ್ವನ ಕಾರ್ಯದರ್ಶಿ ಬಶೀರ್ ಸಅದಿ ಪೀಣ್ಯ, ಎಸ್.ಎಂ.ಎ.ಬೆಂಗಳೂರು ಜಿಲ್ಲಾಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ಅಲ್ಸೂರ್, ಹಾವೇರಿ ಜಿಲ್ಲಾ ವಖ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಬಿ.ಎ.ಇಬ್ರಾಹೀಂ ಸಖಾಫಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಖಾಫಿ, ಮಸ್‌ನವೀ ಗ್ಲೋಬಲ್ ಅಕಾಡೆಮಿ ಮ್ಯಾನೇಜರ್ ನೌಫಲ್ ಮದನಿ ನೇಜಾರು ಶುಭ ಹಾರೈಸಿದರು.
ಜಿಲ್ಲಾಧ್ಯಕ್ಷ ಜಾಫರ್ ನೂರಾನಿ ಅಧ್ಯಕ್ಷತೆ ವಹಿಸಿದರು.ಇಬ್ರಾಹೀಂ ಸಖಾಫಿ ಪಯೋಟ ಸ್ವಾಗತಿಸಿ ಮುನೀರ್ ಕೆ.ಆರ್.ಪುರ ಧನ್ಯವಾದ ಸಲ್ಲಿಸಿದರು