ಖುತುಬುಝ್ಝಮಾನ್ ಸಯ್ಯದ್ ಮದನಿ ದರ್ಗಾ ಉಳ್ಳಾಲ: ನೂತನ ಸಮಿತಿಯ ಅಧ್ಯಕ್ಷರಾಗಿ ಹನೀಫ್ ಹಾಜಿ ಆಯ್ಕೆ
ಉಳ್ಳಾಲ: ಇಲ್ಲಿನ ಇತಿಹಾಸ ಪ್ರಸಿದ್ದ ಉಳ್ಳಾಲ ಖುತುಬುಝ್ಝಮಾನ್ ಸಯ್ಯದ್ ಮದನಿ (ಖಸಿ) ದರ್ಗಾ ಮತ್ತು ಕೇಂದ್ರ ಮಸೀದಿ (402) ನೂತನ ಸಮಿತಿಯ ಅಧ್ಯಕ್ಷರಾಗಿ ಹನೀಫ್ ಹಾಜಿ ಆಯ್ಕೆಯಾಗಿದ್ದಾರೆ.
ಉಳ್ಳಾಲ ದರ್ಗಾ ಸಮಿತಿಯ ಆಯ್ಕೆಗಾಗಿ ವಖ್ಫ್ ಬೋರ್ಡ್ ಆದೇಶ ಪ್ರಕಾರ ಚುನಾವಣೆ ನಡೆದಿತ್ತು. ಇದರ ಪ್ರಕಾರ ಇಂದು ನಡೆದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ಹನೀಫ್ ಹಾಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಮಿತಿಯ ಉಪಾಧ್ಯಕ್ಷರಾಗಿ ರೈಟ್ ವೇ ಅಶ್ರಫ್, ಪ್ರಧಾನ ಕಾರ್ಯದರ್ಶಿಯಾಗಿ ಶಿಹಾಬುದ್ದೀನ್ ಸಖಾಫಿ ಮತ್ತು ಕೋಶಾಧಿಕಾರಿಯಾಗಿ ನಾಝಿಂ ಕೋಟೆಪುರ ಆಯ್ಕೆಗೊಂಡಿದ್ದಾರೆ.