ಖಿಯಾದ: SSF ರಾಜ್ಯ ಪ್ರತಿನಿಧಿ ಸಮಾವೇಶಕ್ಕೆ ಕ್ಷಣಗಣನೆ

ಖಿಯಾದ: SSF ರಾಜ್ಯ ಪ್ರತಿನಿಧಿ ಸಮಾವೇಶಕ್ಕೆ ಕ್ಷಣಗಣನೆ
ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಇದರ ಪ್ರತಿನಿಧಿ ಸಮಾವೇಶ ಮತ್ತು ರಾಜ್ಯ ಕೌನ್ಸಿಲ್ ಇಂದು ಮತ್ತು ನಾಳೆ (ಮಾರ್ಚ್ 18-19) ರಂದು ದಕ ಜಿಲ್ಲೆಯ ಕಾಶಿಬೆಟ್ಟು ಮಲ್‌ಜ‌ಅ ಕ್ಯಾಂಪಸ್ ನಲ್ಲಿ (ಉಜಿರೆ ಹಳೆಪೇಟೆ ಸಮೀಪ) ನಡೆಯಲಿದೆ.

ರಾಜ್ಯದ ವಿವಿಧ  ಜಿಲ್ಲೆಗಳಿಂದ ಯುನಿಟ್, ಸೆಕ್ಟರ್, ಡಿವಿಷನ್, ಜಿಲ್ಲೆಗಳಿಗೆ ನಾಯಕರಾಗಿ ಆಯ್ಕೆಯಾದ ಎರಡು ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಖ್ಯಾತ ತರಬೇತುದಾರರಿಂದ ವಿಶೇಷ ತರಗತಿ ನಡೆಯಲಿದೆ. ಮುಂದಿನ ಎರಡು ವರ್ಷಕ್ಕೆ ಸಂಘಟನೆ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ  ತರಗತಿಗಳು ಈ ಸಮಾವೇಶದಲ್ಲಿ ನಡೆಯಲಿದೆ. 

ರಾಜ್ಯ SSF ಇದರ ವಾರ್ಷಿಕ ಕೌನ್ಸಿಲ್ ಸಭೆ ಕೂಡ ನಡೆದು ರಾಜ್ಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಮಾ.19 ರಂದು ಸಮಾರೋಪ ಸಮಾರಂಭದಲ್ಲಿ ನವ ನಾಯಕತ್ವದ ಘೋಷಣೆ ನಡೆಯಲಿದೆ. ಎಸ್‌ಎಮ್‌ಎ ರಾಜ್ಯಾಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಧ್ವಜಾರೋಹಣ ನಡೆಸಲಿದ್ದಾರೆ. ಉದ್ಘಾಟನೆ ಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ.‌ ಕಾವಳಕಟ್ಟೆ ಹಝ್ರತ್ ನೆರವೇರಿಸಲಿದ್ದಾರೆ. 

ಕರ್ನಾಟಕ ರಾಜ್ಯ ಉಲಮಾ ಒಕ್ಕೂಟದ ಅಧ್ಯಕ್ಷ, ಖಾಝಿ‌ ಶೈಖುನಾ ಮಾಣಿ ಉಸ್ತಾದ್ ಸಮಾರೋಪ ಸಮಾರಂಭದಲ್ಲಿ  ಭಾಗವಹಿಸಲಿದ್ದಾರೆ. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸ‌ಅದಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮಾರ್ಚ್ 19 ರಂದು ಸಂಜೆ 4.00 ಕ್ಕೆ   ಹಳೆಪೇಟೆಯಿಂದ ಉಜಿರೆ ಬೆಳಾಲು ತಿರುವು ರಸ್ತೆವರೆಗೆ ಕಾರ್ಯಕರ್ತರ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ.
Previous Post Next Post