ಚಂದ್ರ ದರ್ಶನವಾಗಿಲ್ಲ: ನಾಳೆ ರಮದಾನ್ 30 , ಶನಿವಾರ ಈದುಲ್ ಫಿತರ್
ಮಂಗಳೂರು, ಎಪ್ರಿಲ್ 20: ಇಂದು ಯಾವುದೇ ಭಾಗದಲ್ಲಿ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ನಾಳೆ ರಮದಾನ್ 30 ಆಗಿರುತ್ತದೆ ಗೌರವಾನ್ವಿತ ಖಾಝಿಗಳು ತಿಳಿಸಿರುತ್ತಾರೆ.
ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಆಗಿರುವುದರಿಂದ ಕರಾವಳಿ ಕರ್ನಾಟಕ, ಕೇರಳದಾದ್ಯಂತ ಶನಿವಾರ ಎಪ್ರಿಲ್ 22 ಈದುಲ್ ಫಿತ್ರ್ ಚೆರಿಯ ಪೆರುನಾಳ್ ಆಚರಿಸಲು ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಅಲ್ ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.