ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ರಾಜ್ಯಕ್ಕೆ ಪ್ರಥಮ, ಉಡುಪಿ ದ್ವಿತೀಯ, ಕೊಡಗು ತೃತೀಯ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ರಾಜ್ಯಕ್ಕೆ ಪ್ರಥಮ, ಉಡುಪಿ ದ್ವಿತೀಯ, ಕೊಡಗು ತೃತೀಯ 
ಬೆಂಗಳೂರು,ಏ.21- ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ದಾಖಲೆಯ ಶೇ.74.67ರಷ್ಟು ಫಲಿತಾಂಶ ಪ್ರಕಟಗೊಂಡಿದೆ. ಎಂದಿನಂತೆ ಫಲಿತಾಂಶದಲ್ಲಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಸಿದ್ದು, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳೇ ಫಲಿತಾಂಶದಲ್ಲಿ ಮುನ್ನಡೆ ಸಾಸಿದ್ದಾರೆ.
ಬೆಂಗಳೂರಿನ ಎನ್‍ಎಂಕೆ ಆರ್‍ವಿ ಕಾಲೇಜಿನ ವಿದ್ಯಾರ್ಥಿನಿ ತಬಸಮ್ ಶೇಕ್ ಕಲಾ ವಿಭಾಗದಲ್ಲಿ 600 ಅಂಕಗಳಿಗೆ 593 ಅಂಕಗಳನ್ನು ಪಡೆದಿದ್ದರೆ, ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಆಳ್ವಾಸ್ ಕಾಲೇಜಿನ ಅನನ್ಯ ಕೆ.ಎ 600ಕ್ಕೆ 600 ಅಂಕಗಳು ಹಾಗೂ ವಿಜ್ಞಾನ ವಿಭಾಗದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕಾಲೇಜಿ ಗಂಗೋತ್ರಿ ಪಿಯು ಕಾಲೇಜಿನ ಎಸ್.ಎಂ.ಕೌಶಿಕ್ ಅವರು 600 ಅಂಕಗಳಿಗೆ 596 ಅಂಕ ಪಡೆದು ಮೊದಲ ರ್ಯಾಂಕ್ ಗಳಿಸಿದ್ದಾರೆ.

# ಅನನ್ಯ ರಾಜ್ಯದಲ್ಲೇ ಪ್ರಥಮ ರ್ಯಾಂಕ್
ಬೆಂಗಳೂರು,ಏ.21-ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದರೆಯ ಆಳ್ವಾಸ್ ಪದವಿಪೂರ್ವ ಕಾಲೇಜು ವಾಣಿಜ್ಯ ವಿಭಾಗದ ಅನನ್ಯ.ಕೆ.ಎ 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯದಲ್ಲೇ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಜಿಲ್ಲಾವಾರು ಫಲಿತಾಂಶ
ದಕ್ಷಿಣ ಕನ್ನಡ - ಶೇ.95.33
ಉಡುಪಿ -ಶೇ.95.24
ಕೊಡಗು - ಶೇ.90.55
ಉತ್ತರ ಕನ್ನಡ - ಶೇ.89.74
ವಿಜಯಪುರ- ಶೇ.84.69
ಚಿಕ್ಕಮಗಳೂರು- ಶೇ.83.28
ಹಾಸನ - ಶೇ.83.14
ಶಿವಮೊಗ್ಗ - ಶೇ.83.13
ಬೆಂಗಳೂರು ಗ್ರಾಮಾಂತರ - ಶೇ.83.04
ಬೆಂಗಳೂರು ದಕ್ಷಿಣ- ಶೇ.82.30
ಬೆಂಗಳೂರು ಉತ್ತರ- ಶೇ.82.25
ಚಾಮರಾಜನಗರ - ಶೇ.81.92
ಮೈಸೂರು- ಶೇ.79.89
ಕೋಲಾರ - ಶೇ.79.20
ಬಾಗಲಕೋಟೆ- ಶೇ.78.79
ಚಿಕ್ಕೋಡಿ- ಶೇ. 78.76
ರಾಮನಗರ- ಶೇ.78.12
ಬೀದರ್ - ಶೇ.78
ಚಿಕ್ಕಬಳ್ಳಾಪುರ - ಶೇ. 77.77
ಮಂಡ್ಯ- ಶೇ.77.47
ದಾವಣಗೆರೆ - ಶೇ.75.72
ಕೊಪ್ಪಳ- ಶೇ.74.8
ತುಮಕೂರು - ಶೇ.74.50
ಹಾವೇರಿ - ಶೇ.74.13
ಬೆಳಗಾವಿ- ಶೇ.73.98
ಧಾರವಾಡ - ಶೇ.73.54
ಬಳ್ಳಾರಿ- ಶೇ.69.55
ಚಿತ್ರದುರ್ಗ- ಶೇ.69.50
ಕಲ್ಬರ್ಗಿ - ಶೇ.69.37
ಗದಗ- ಶೇ.66.91
ರಾಯಚೂರು- ಶೇ.66.21
ಯಾದಗಿರಿ- ಶೇ.62.98
Previous Post Next Post