April 29 SSF ಸ್ಥಾಪಕ ದಿನ: SSF ಗೆ ಇಂದು ಸುವರ್ಣ ಸಂಭ್ರಮ

April 29 SSF ಸ್ಥಾಪಕ ದಿನ: SSF ಗೆ ಇಂದು ಸುವರ್ಣ ಸಂಭ್ರಮ 
1973 ಎಪ್ರಿಲ್ 29 ರಂದು ಕೇರಳದಲ್ಲಿ ಜನ್ಮತಾಳಿದ SSF ಗೆ ಇಂದು ಸುವರ್ಣ ಸಂಭ್ರಮ. ಎಲ್ಲಾ ಕಾರ್ಯಕರ್ತರಿಗು ಸುವರ್ಣ ಸಂಭ್ರಮದ ಶುಭಾಶಯಗಳು. ಐವತ್ತು ವರ್ಷಗಳಲ್ಲಿ SSF ಸಾಧಿಸಿದ ಸಾಧನೆಗಳು ಹಲವು. ಕಲ್ಲು ಮುಳ್ಳುಗಳ ಹಾದಿಯಲ್ಲಿ ಸಾಗಿಬಂದು ಕಷ್ಟ ತ್ಯಾಗಗಳನ್ನು ಸಹಿಸಿ ಬೆಳೆದ SSF ಇಂದು ನಾಡಿನಾದ್ಯಂತ ಹೆಮ್ಮರವಾಗಿ ಬೆಳೆದಿದೆ. ಸುವರ್ಣ ಸಂಭ್ರಮದ ಭಾಗವಾಗಿ ದೇಶದ ವಿವಿಧ ರಾಜ್ಯಗಳಲ್ಲಿ SSF ವಿದ್ಯಾರ್ಥಿ ಸಮ್ಮೇಳನಗಳು ನಡೆಯುತ್ತಿದೆ. ನಮ್ಮ ನೆರೆಯ ಕೇರಳ ರಾಜ್ಯ ಇಂದು ಐತಿಹಾಸಿಕ ಸಮ್ಮೇಳನವೊಂದಕ್ಕೆ ಸಾಕ್ಷಿಯಾಗುತ್ತಿದೆ. ಗೋಲ್ಡನ್ ಫಿಫ್ಟಿ ಕೇರಳ ರಾಜ್ಯ ಸಮಾರೋಪ ಮಹಾ ಸಂಗಮ ಇಂದು ಕಣ್ಣೂರು ನಗರದ ಪೊಲೀಸ್ ಮೈದಾನದಲ್ಲಿ ನಡೆಯುವಾಗ ಕರುನಾಡ ಕಾರ್ಯಕರ್ತರಾದ ನಾವೆಲ್ಲರೂ ಆ ಮನುಷ್ಯ ಮಹಾ ಸಮುದ್ರಲ್ಲಿ ಬಿಂದುಗಳಾಗೋಣ  

#1973-2023 #goldenfifty
#wethepeopleofindia

ಎಮ್ಮೆಸ್ಸೆಂ ಜುನೈದ್ ಸಖಾಫಿ ಹಿಮಮಿ (ಕಾರ್ಯದರ್ಶಿ SSF ಕರ್ನಾಟಕ)

Previous Post Next Post