ತಾನೂರು ಬೋಟು ಅಪಘಾತ: ಮರಣ ಸಂಖ್ಯೆ 20ಕ್ಕೆ ಏರಿಕೆ

ತಾನೂರು ಬೋಟು ಅಪಘಾತ: ಮರಣ ಸಂಖ್ಯೆ 20ಕ್ಕೆ ಏರಿಕೆ

ಮಲಪ್ಪುರಂ |ಮೇ 07]  ತಾನೂರಿನಲ್ಲಿ ಬೋಟು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 20 ದಾಟಿದೆ ಎಂದು ತಿಳಿದು ಬಂದಿದೆ. 21 ಮಂದಿ ಸಾವನ್ನಪ್ಪಿದ್ದಾರೆ ಎಂದು ಅನಧಿಕೃತ ವರದಿಗಳು ತಿಳಿಸಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು.  ಇದುವರೆಗೆ 15 ಮಂದಿಯನ್ನು ರಕ್ಷಿಸಲಾಗಿದೆ.  ಇನ್ನೂ ಕೆಲವರ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.  ಇಂದು ಸಂಜೆ 6.30ರ ಸುಮಾರಿಗೆ ಪರಪ್ಪನಂಗಡಿ-ತಾನೂರು ನಗರಸಭಾ ಗಡಿಭಾಗದ ಒಟ್ಟುಂಪುರಂ ಕಡಲತೀರದಲ್ಲಿ ವಿನೋದ ಯಾತ್ರೆಯ ದೋಣಿ ಮುಳುಗಿದೆ. ಕಡಲ ತೀರದಿಂದ 300 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ರಕ್ಷಣಾ ಕಾರ್ಯ ಭರದಿಂದ ದಾಗುತ್ತಿದೆ.
Previous Post Next Post