ನಾಳೆ ರಾಜ್ಯದಲ್ಲಿ SSLC ಫಲಿತಾಂಶ ಪ್ರಕಟ

ನಾಳೆ ರಾಜ್ಯದಲ್ಲಿ SSLC ಫಲಿತಾಂಶ ಪ್ರಕಟ


ಬೆಂಗಳೂರು, ಮೇ 7: ಪ್ರಸಕ್ತ (2022-23) ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಮೇ 8ರಂದು ಪ್ರಕಟಗೊಳ್ಳಲಿದೆ.

ಸೋಮವಾರ ಪೂರ್ವಾಹ್ನ 11 ಗಂಟೆಗೆ https://karresults.nic.in/ ಜಾಲತಾಣದಲ್ಲಿ ಪ್ರಕಟವಾಗಲಿದೆ.ಅಧಿಕೃತ ವೆಬ್‌ಸೈಟ್ www.karresults.nic.in ಗೆ ಭೇಟಿ

ಮುಖಪುಟದಲ್ಲಿ ಕರ್ನಾಟಕ SSLC 2023 ಫಲಿತಾಂಶ ಲಿಂಕ್ ಅನ್ನು ಒತ್ತಿರಿ ತೆರೆಯುವ ಹೊಸ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ವಿವರಗಳನ್ನು ಸಲ್ಲಿಸಿ ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ

ಕಳೆದ ಬಾರಿ ಅಂದರೆ 2022 ರಲ್ಲಿ, ಒಟ್ಟಾರೆ ಉತ್ತೀರ್ಣ ಶೇಕಡಾ 85.63 ರಷ್ಟು ದಾಖಲಾಗಿತ್ತು. ಇದರಲ್ಲಿ 145 ವಿದ್ಯಾರ್ಥಿಗಳು ಶೇ 100 ಅಂಕ ಗಳಿಸಿದ್ದರು. ಈ ವರ್ಷ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 28ನೇ ಮಾರ್ಚ್‌ನಿಂದ 11ನೇ ಏಪ್ರಿಲ್ 2023 ರವರೆಗೆ ನಡೆದಿತ್ತು. ಏಪ್ರಿಲ್ 17 ರಂದು ಕೀ ಉತ್ತರ ಬಿಡುಗಡೆಯಾಗಿತ್ತು. ಈ ಬಾರಿ ಒಟ್ಟು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.

Previous Post Next Post