ಸಿಎಂ ಆಯ್ಕೆ ವಿಚಾರ ಹೈಕಮಾಂಡ್ ಹೆಗಲಿಗೆ: ನಾಳೆ ಸಿದ್ದರಾಮಯ್ಯ ಡಿಕೆಶಿ ದೆಹಲಿಗೆ
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಸಿಎಂ ಆಯ್ಕೆಯನ್ನು ಹೈಕಮಾಂಡ್ ತೀರ್ಮಾನಕ್ಕೆ ಬಿಡಲು ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಡಿಕೆಶಿಗೆ ಸೋನಿಯಾ ರಾಹುಲ್ ದೆಹಲಿಗೆ ಬುಲಾವ್ ನೀಡಿದ್ದು ನಾಳೆ ಇಬ್ಬರೂ ದೆಹಲಿ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ವಿಚಾರ ಹೈಕಮಾಂಡ್ ಆಯ್ಕೆ ಮಾಡಲಿದೆ.