ನೂತನ ಸಿಎಂ ಮತ್ತು ಸಚಿವರ ಸ್ವಾಗತಕ್ಕೆ 'ಶಕ್ತಿ ಸೌಧ' ಸಜ್ಜು, ವಿಧಾನ ಸೌಧದಲ್ಲಿ ಭರ್ಜರಿ ತಯಾರಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನವನ್ನು ಗೆಲ್ಲುವ ಮೂಲಕ, ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆಯ ಕಸರತ್ತಿನಲ್ಲಿ ತೊಡಗಿದೆ. ಈ ಬೆನ್ನಲ್ಲೇ ರಾಜ್ಯದ ಶಕ್ತಿ ಸೌಧ ವಿಧಾನಸೌಧದಲ್ಲಿಯೂ ನೂತನ ಸಿಎಂ, ಸಚಿವರ ಸ್ವಾಗತಕ್ಕಾಗಿ ಭರ್ಜರಿ ತಯಾರಿಗಳನ್ನು ನಡೆಸಲಾಗುತ್ತಿದೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವಂತ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಹಳೆಯ ವಸ್ತುಗಳನ್ನು ಬದಲಾಯಿಸುವುದು, ಬಣ್ಣ ಬಳಿಯುತ್ತಿರುವ ಕಾರ್ಯ ನಡೆಯುತ್ತಿದೆ. ವಿಧಾನಸೌಧವನ್ನು ಸ್ವಚ್ಛಗೊಳಿಸುವಂತ ಕಾರ್ಯದಲ್ಲೂ ಸಿಬ್ಬಂದಿಗಳು ನಿರತರಾಗಿದ್ದಾರೆ.
ಇನ್ನೂ ವಿಧಾನಸೌಧದದಲ್ಲಿ ಹಳೆಯ ಸಚಿವರ ಬೋರ್ಟ್, ವಸ್ತುಗಳನ್ನು ಸಾಗಿಸುವ ಕಾರ್ಯವೂ ನಡೆಯುತ್ತಿದೆ. ನೂತನ ಮುಖ್ಯಮಂತ್ರಿಗಳು, ಸಚಿವರನ್ನು ಸ್ವಾಗತಿಸುವುದಕ್ಕಾಗಿ ಬೇಕಿರುವಂತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಪ್ರತಿ ಕೊಠಡಿಯನ್ನು ಶುಚಿಗೊಳಿಸಿ ಸಿಂಗರಿಸುವ ಕಾರ್ಯದಲ್ಲಿ ಸಿಬ್ಬಂದಿಗಳು ತೊಡಗಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆಯಾಗಿ ಸಚಿವಸ್ಥಾನ ಹಂಚಿಕೆಯ ಬಳಿಕ, ವಿಧಾನಸೌಧ, ವಿಕಾಸ ಸೌಧದಲ್ಲಿ ಸಚಿವರಿಗೆ ಕೊಠಡಿ ಹಂಚಿಕೆಯಾಗಲಿದೆ.
ಸಿಎಂ ಆಯ್ಕೆ ನಾಳೆ ಸಾದ್ಯತೆ, ನಾಳೆ ಮತ್ತೆ ಕಾಂಗ್ರೆಸ್ ಸಭೆ