ರಾಜ್ಯದಲ್ಲಿ ಇಂದಿನಿಂದ 'ಗೋಲ್ಡನ್ ಸಫಾರಿ' ಶುರು
ಎಸ್ಸೆಸ್ಸೆಫ್ ವಿದ್ಯಾರ್ಥಿ ಶಕ್ತಿಗೆ ಐವತ್ತು ಸಂವತ್ಸರಗಳು ತುಂಬುತ್ತಿದ್ದು ಈ ಪ್ರಯುಕ್ತ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಎಸ್ಸೆಸ್ಸೆಫ್ ವಿದ್ಯಾರ್ಥಿ ಸಮ್ಮೇಳನಗಳು ನಡೆಯುತ್ತಿದೆ. ಈ ಪ್ರಯುಕ್ತ ಕರ್ನಾಟಕ ರಾಜ್ಯ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ 2023 ಸೆಪ್ಟೆಂಬರ್ ಹತ್ತು ಬೆಂಗಳೂರಿನಲ್ಲಿ ನಡೆಯಲಿದೆ.
ಗೋಲ್ಡನ್ ಫಿಫ್ಟಿ ಪ್ರಯುಕ್ತ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳು ರಾಜ್ಯ ಸಮಿತಿಯು ಹಮ್ಮಿಕೊಂಡಿದ್ದು ಆ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲೂ ಸಂಘಟನೆ ಬಲಿಷ್ಠಗೊಳ್ಳಲು ಯೋಜನೆಗಳು ಹಾಕಿಕೊಂಡಿದೆ. ಜೂನ್ ಐದು /ಇಂದಿನಿಂದ ರಾಜಧಾನಿ ಬೆಂಗಳೂರಿನ ತವಕ್ಕಲ್ ಮಸ್ತಾನ್ ದರ್ಗಾ ಝಿಯಾರತ್ ನೊಂದಿಗೆ ರಾಜ್ಯ ನಾಯಕರ ರಾಜ್ಯ ಸಂಚಾರ 'ಗೋಲ್ಡನ್ ಸಫಾರಿ' ಆರಂಭವಾಗಲಿದ್ದು ಮೂರು ಹಂತಗಳಲ್ಲಿ ಮೂವತ್ತೊಂದು ಜಿಲ್ಲೆಗಳನ್ನು ಹಾದುಹೋಗಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಶ ಹಾಫಿಝ್ ಸುಫಿಯಾನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.