ಶಿವಮೊಗ್ಗ 'ಸಆದಾ ಡಿಸೆನಿಯಂ' -ಗೆ ನಾಳೆ ಎ.ಪಿ.ಉಸ್ತಾದರಿಂದ ಚಾಲನೆ
ಶಿವಮೊಗ್ಗ ನಗರದ ವಾದಿ ಹುದಾದಲ್ಲಿ ಕಳೆದ ಏಳು ವರ್ಷಗಳ ಹಿಂದೆ, 2016 ಜೂನ್ ಆರರಂದು ಸಯ್ಯಿದ್ ಶಹೀದುದ್ದೀನ್ ಅಲ್ ಬುಖಾರಿ ಶಿಮೋಗ ತಂಙಳ್ ಅವರಿಂದ ಪ್ರಾರಂಭಗೊಂಡ 'ಮರ್ಕಝ್ ಸಆದಾ' ಸಂಸ್ಥೆಯು ನಾಳೆ (ಜೂನ್ ಆರು 2023) ಎಂಟನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಮುಂದಿನ ಮೂರು ವರ್ಷಗಳ ಕಾಲ ವಿವಿಧ ಕಾರ್ಯಯೋಜನೆಗಳೊಂದಿಗೆ ವಿಜೃಂಭಣೆಯ ಹತ್ತನೇ ವರ್ಷಾಚರಣೆ ನಡೆಸಲು ನಿರ್ಧರಿಸಲಾಗಿದೆ
'ಸಆದಾ ಡಿಸೆನಿಯಂ-ವಿಷನ್ 26' ಎಂಬ ಹೆಸರಿನಲ್ಲಿ
2023 ಜೂನ್ ಆರರಿಂದ 2026 ಜೂನ್ ಆರರ ತನಕ ಮೂರು ವರ್ಷಗಳ ಕಾಲ ನಡೆಯುವ ಈ ಅಭಿಯಾನಕ್ಕೆ ನಾಳೆ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರು ಮರ್ಕಝ್ನಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ.
ಹತ್ತನೇ ವರ್ಷಾಚರಣೆಯ ಪ್ರಯುಕ್ತ ನೂತನ ಬಹುಮುಖ ಶೈಕ್ಷಣಿಕ ಯೋಜನೆಗಳು 'ಹೈಲಾಂಡ್ ಎಜುಸಿಟಿ' ಎಂಬ ಹೆಸರಲ್ಲಿ ಕಾರ್ಯ ನಿರ್ವಹಿಸಲಿದೆ. ಇದರ ಮೊದಲ ಹಂತವಾಗಿ ಇಸ್ಲಾಮಿಕ್ ದಅ್ವಾ ಕಾಲೇಜು ಹಾಗೂ ಮಹಿಳಾ ಕಾಲೇಜು ಕಾರ್ಯ ನಿರ್ವಹಿಸುವುವು. ಅಭಿಯಾನದ ಕಾಲಾವಧಿಯಲ್ಲಿ ಹತ್ತು ಸಂಸ್ಥೆಗಳು ಮತ್ತು ಹತ್ತು ಯೋಜನೆಗಳನ್ನು ಸಮಯಬಂಧಿತವಾಗಿ ಅನುಷ್ಠಾನ ಗೊಳಿಸಲಾಗುವುದು.
ಹೈಲಾಂಡ್ ಎಜುಸಿಟಿಯು ಮುಖ್ಯವಾಗಿ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ,ಚಿಕ್ಕಮಗಳೂರು, ಹಾಸನ,ಹಾಗೂ ಉತ್ತರ ಕನ್ನಡದ ಮಲೆನಾಡು ಪ್ರದೇಶಗಳ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃಧ್ದಿಯನ್ನು ಗುರಿಯಾಗಿಸಿ ಕಾರ್ಯ ನಿರ್ವಹಿಸುವುದು.
ಹೈಲಾಂಡ್ ಎಜುಸಿಟಿಯು ಸಯ್ಯಿದ್ ಶಿಮೋಗ ತಂಙಳ್ ಅವರ ಅದ್ಯಕ್ಷತೆಯಲ್ಲಿ ,ಪ್ರಮುಖ ಉದ್ಯಮಿ, ಮುಸ್ಲಿಂ ಮುಂದಾಳು ಹಾಜಿ ಇಖ್ಬಾಲ್ ಹಬೀಬ್ ಸೇಠ್ ಶಿವಮೊಗ್ಗ,ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್, ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್ಲತೀಫ್ ಸಅದಿ , ಅಬ್ದುಲ್ ಜಬ್ಬಾರ್ ಸಅದಿ ಮುಂತಾದವರ ನೇತೃತ್ವದ ತಂಡದ ಸಾರಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ.