ಇಂದು ಅರಫಾ ಸಂಗಮ: ಮಿನಾದಲ್ಲಿ ರಾತ್ರಿ ತಂಗಿದ ಹಜ್ಜಾಜ್ ಗಳು ಇಂದು ಸುಬಹಿ ನಮಾಝಿನೊಂದಿಗೆ ಅರಫಾ ಮೈದಾನದತ್ತ ಪ್ರಯಾಣ

ಇಂದು ಅರಫಾ ಸಂಗಮ: ಮಿನಾದಲ್ಲಿ ರಾತ್ರಿ ತಂಗಿದ ಹಜ್ಜಾಜ್ ಗಳು ಇಂದು ಸುಬಹಿ ನಮಾಝಿನೊಂದಿಗೆ ಅರಫಾ ಮೈದಾನದತ್ತ ಪ್ರಯಾಣ
ಮಕ್ಕಾ: ಇಂದು ಅರಫಾದಲ್ಲಿ ಲಕ್ಷಾಂತರ ಹಾಜಿಗಳು ಸೇರಲಿದ್ದಾರೆ.  ಅರಾಫಾಗೆ ಜಗತ್ತಿನ ವಿವಿಧ ಭಾಗಗಳಿಂದ ಹಾಜಿಗಳು ಹರಿದು ಬರುತಿದ್ದು, ಒಂದು ಹಗಲು ರಾತ್ರಿ ಮಿನಾದಲ್ಲಿ ಟೆಂಟ್‌ಗಳಲ್ಲಿ ತಂಗಿ ಇಬಾದತ್ ಕರ್ಮಗಳಲ್ಲಿ ಮುಳುಗಿದ ಹಾಜಿಗಳು ಇಂದು ಸುಬ್ ಹಿ  ನಮಾಝಿನ ನಂತರ ಹಜ್‌ನ ಪ್ರಮುಖ ಕಾರ್ಯವಾದ ಅರಫಾಗೆ ಆಗಮಿಸುತ್ತಿದ್ದಾರೆ.

ಜಗತ್ತಿನ ಅತೀದೊಡ್ಡ ವಿಶ್ವಾಸಿ ಸಂಗಮವಾಗಿದೆ ಅರಫಾ. ತಲ್ಬಿಯತ್ ಹೇಳುತ್ತಾ ಹಾಜಿಗಳು ಭಾನುವಾರದಿಂದಲೇ ಮಿನಾಗೆ ತಲುಪುತಿದ್ದರು. ನಿನ್ನೆ ಸಂಜೆಯೊಂದಿಗೆ ಎಲ್ಲಾ ಹಾಜಿಗಳು ಮಿನಾ ತಲುಪಿದರು. ಹಜ್ಜ್ ಕರ್ಮದ ಎರಡನೇ ದಿನವಾಗಿರುತ್ತದೆ ಅರಫಾ ಸಂಗಮ. ಇಂದು ಳುಹರ್ ಮತ್ತು ಅಸರ್ ನಮಾಝ್ ಹಾಜಿಗಳು ಅರಫಾದಲ್ಲಿ ನಿರ್ವಹಿಸುತ್ತಾರೆ. ಸೂಯ್ರಾಸ್ತಮಾನದವರೆಗೆ ಇಬಾದತ್ ನಲ್ಲಿ ಮುಳುಗುತ್ತಾರೆ. 

ಅರಫಾ ಖುತುಬಾ ಮತ್ತು ನಮಾಝಿಗೆ ಸೌದಿ ಅರೇಬಿಯಾದ ಉನ್ನತ ಪಂಡಿತ ಸಭಾಸದಸ್ಯರು ಶೈಖ್ ಯೂಸುಫ್ ಬಿನ್ ಮುಹಮ್ಮದ್ ಬಿನ್ ಸಈಸ್ ನೇತೃತ್ವ ನೀಡಲಿದ್ದಾರೆ. 
Previous Post Next Post