ಸಮಾಪ್ತಿಗೊಂಡ ಅರಫಾ ಮಹಾ ಸಂಗಮ: ಮುಝ್ದಲಿಫದಲ್ಲಿ ರಾತ್ರಿ ತಂಗಿದ ಹಾಜಿಗಳು

ಸಮಾಪ್ತಿಗೊಂಡ ಅರಫಾ ಮಹಾ ಸಂಗಮ: ಮುಝ್ದಲಿಫದಲ್ಲಿ ತಂಗಿದ ಹಾಜಿಗಳು
ಪ್ರವಾದಿ ಖಲೀಲುಲ್ಲಾಹಿ ಇಬ್ರಾಹಿಂ (ಅ) ಮತ್ತುಮಗ ಇಸ್ಮಾಯಿಲ್ (ಅ) ರ ತ್ಯಾಗ ಮತ್ತು ಸಮರ್ಪಣೆಯ ಸ್ಮರಣಾರ್ಥವಾಗಿ ಅಲ್ಲಾಹನ ಕರೆಗೆ ಉತ್ತರ ಕೊಟ್ಟು ಲಬ್ಬೈಕಿನ ಮಂತ್ರಗಳನ್ನು ಪಠಿಸುತ್ತಾ, ಒಂದು ಹಗಲು ಪೂರ್ಣ ಅರಫಾ ಮೈದಾನದಲ್ಲಿ ಕಳೆಯುವುದರೊಂದಿಗೆ ಈ ವರ್ಷದ ಅರಫಾ ಕೂಟವು ಅದ್ದೂರಿಯಾಗಿ ಮುಕ್ತಾಯಗೊಂಡಿತು.


ಮೊನ್ನೆ ಮಿನಾದಲ್ಲಿ ರಾತ್ರಿ ಕಳೆದ ಹಾಜಿಗಳು ನಿನ್ನೆ ಮಧ್ಯಾಹ್ನದೊಂದಿಗೆ ಮಶಾಇರ್ ಟ್ರೇನ್ ಬಸ್ ಗಳ ಮೂಲಕ ಅರಫಾ ತಲುಪಿದರು. 'ಅಲ್ಲಾಹನೇ ನಾವು ನಿನ್ನ ಕರೆಗೆ ಓಗೊಟ್ಟಿದ್ದೇವೆ' ಎಂಬ ಅರ್ಥುವುಳ್ಳ ಲಬ್ಬೈಕಿನ ಮಂತ್ರ ಪಠಿಸುತ್ತಾ ಹಾಜಿಗಳು ದೇಶ, ಭಾಷೆ ಬಣ್ಣ ವರ್ಣ ವ್ಯತ್ಯಾಸಗಳಿಲ್ಲದೆ ಶುಭ್ರ ವಸ್ರ ಧರಿಸಿದ ಹಾಜಿಗಳು ಮಸ್ಜಿದ್ ನಮಿರದಲ್ಲೂ ಮಸ್ಜಿದ್ ಜಬಲುರ್ರಹ್ಮ ದಲ್ಲೂ ತಲುಪುವುದರೊಂದಿಗೆ ಅರಫಾ ನಗರ ಅಕ್ಷರಶಃ ಹಾಲ್ಗಡಲಾಯಿತು. ಹಜ್ಜ್ ನ ಪ್ರಮುಖ ಕರ್ಮವಾದ ಅರಫಾ ಜಗತ್ತಿನ ಅತೀದೊಡ್ಡ ಮಾನವ ಸಂಗಮವಾಗಿದೆ. ಹಜ್ಜ್ ಅಂದರೆ ಅರಫಾ ಎಂದಾಗಿದೆ ಪ್ರವಾದಿ ವಚನ. 

ಸೂರ್ಯಾಸ್ತಮಾನದೊಂದಿಗೆ ಮುಝ್ದಲಿಫದತ್ತ ಹಾಜಿಗಳು ತೆರಳಿದರು. ಅಲ್ಲಿ ಮಗ್ರಿಬ್ ಇಶಾ ನಮಾಝ್ ಮಾಡಿ ಜಂಮ್ರಗಳಿಗೆ ಎಸೆಯಲಿರುವ ಕಲ್ಲುಗಳನ್ನು ಶೇಖರಿಸಿದರು. ಸುಬಹಿ ನಮಾಝಿಗೆ ಮಿನಾ ತಲುಪಿ ಪ್ರಥಮ ದಿನ ಜಮ್ರಗಳಿಗೆ ಕಲ್ಲೆಸೆತ ಕರ್ಮ ನಿರ್ವಹಿಸುವರು. 




Previous Post Next Post