ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗೂಂಡುರಾವ್

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗೂಂಡುರಾವ್


ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹೊಣೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೆಗಲೇರಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಗುಂಡುರಾವ್, ದಕ್ಷಿಣ ಕನ್ನಡದಲ್ಲಿನ ನೈತಿಕ ಪೊಲೀಸ್‌ಗಿರಿ ಅಂತ್ಯಹಾಡುವುದಾಗಿ ಹೇಳಿದ್ದಾರೆ.


ದಕ್ಷಿಣ ಕನ್ನಡದಲ್ಲಿ ಜನ ಸಹೋದರತೆಯಿಂದ ಬದುಕಿ ಬಾಳಬೇಕು. ಅಲ್ಲಿನ ಜನ ಶಾಂತಿ ಸೌಹಾರ್ಧತೆಯಿಂದ ಬಾಳಬೇಕು ಎಂದು ಗುಂಡುರಾವ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಪ್ರಜ್ಞಾವಂತ ಜಿಲ್ಲೆ. ಇಲ್ಲಿ ಜನ ಸಹೋದರತೆಯಿಂದ ಬದುಕಿ ಬಾಳಬೇಕು . ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳತ್ತೇವೆ ಎಂದು ಗುಂಡುರಾವ್ ಹೇಳಿದ್ದಾರೆ. ನಾನೇನು ಯಾವ ಜಿಲ್ಲೆಗೂ ಬೇಡಿಕೆ ಇಟ್ಟಿರಲಿಲ್ಲ, ಇದು ಮುಖ್ಯಮಂತ್ರಿ ಗಳ ನಿರ್ಧಾರವಾಗಿದೆ. ಯಾವ ಜಿಲ್ಲೆಗೆ ಹೋದರು ಕೆಲಸ ಮಾಡಬೇಕು ಎಂದು ಗುಂಡುರಾವ್ ಹೇಳಿದ್ದಾರೆ.


ಡಿಕೆ ಶಿವಕುಮಾರ್: ಬೆಂಗಳೂರು ನಗರ
ಡಾ.ಜಿ ಪರಮೇಶ್ವರ: ತುಮಕೂರು
ಹೆಚ್‌ಕೆ ಪಾಟೀಲ: ಗದಗ
ಕೆಹೆಚ್ ಮನಿಯಪ್ಪ: ಬೆಂಗಳೂರು ಗ್ರಾಮಾಂತರ
ಎಂಬಿ ಪಾಟೀಲ್ : ವಿಜಯಪುರ
ಹೆಚ್‌ಸಿ ಮಹದೇಪವ್ವ: ಮೈಸೂರು
ಪ್ರಿಯಾಂಕ್ ಖರ್ಗೆ: ಕಲಬುರಗಿ
ರಾಮಲಿಂಗ ರೆಡ್ಡಿ - ರಾಮನಗರ
ಲಕ್ಷ್ಮೀ ಹೆಬ್ಬಾಳಕರ್ - ಉಡುಪಿ
ದಿನೇಶ್ ಗಂಡುರಾವ್ - ದಕ್ಷಿಣ ಕನ್ನಡ
ಜಾರ್ಜ್‌: ಚಿಕ್ಕಮಗಳೂರು
ಜಮೀರ್: ವಿಜಯನಗರ
ಕೆ ಎನ್ ರಾಜಣ್ಣ: ಹಾಸನ
ಮಧು ಬಂಗಾರಪ್ಪ: ಶಿವಮೊಗ್ಗ
ಶಿವಾನಂದ ಪಾಟೀಲ್ - ಹಾವೇರಿ
ಬೋಸರಾಜು: ಕೊಡಗು
ಬೈರತಿ ಸುರೇಶ್: ಕೋಲಾರ
ಶರಣ್ ಪ್ರಕಾಶ ಪಾಟೀಲ್ : ರಾಯಚೂರು
ಕೆ ವೆಂಕಟೇಶ: ಚಾಮರಾಜನಗರ
ಸತೀಶ್ ಜಾರಕಿಹೊಳಿ: ಬೆಳಗಾವಿ
ಬೈರತಿ ಸುರೇಶ್: ಕೋಲಾರ
ಶರಣಬಸಪ್ಪ ದರ್ಶನಾಪುರ:ಯಾದಗಿರಿ
ಈಶ್ವರ್ ಖಂಡ್ರೆ: ಬೀದರ್
ಎನ್ ಚೆಲುವರಾಯಸ್ವಾಮಿ: ಮಂಡ್ಯ
ಎಸ್‌ಎಸ್ ಮಲ್ಲಿಕಾರ್ಜುನ: ದಾವಣಗೆರೆ
ಸಂತೋಷ್ ಎಸ್ ಲಾಜ್: ಧಾರವಾಡ
ಶಣಪ್ರಕಾಶ ಪಾಟೀಲ: ರಾಯಚೂರು
ಆರ್‌ಬಿ ತಿಮ್ಮಾಪೂರ: ಬಾಗಲಕೋಟೆ
ಶಿವರಾಜ ತಂಗಡಗಿ: ಕೊಪ್ಪಳ
ಡಿ ಸುಧಾಕರ್ :ಚಿತ್ರದುರ್ಗ
ನಾಗೇಂದ್ರ: ಬಳ್ಳಾರಿ
ಮಂಕಾಳ್ ವೈದ್ಯ:ಉತ್ತರ ಕನ್ನಡ
ಎಂಸಿ ಸುಧಾಕರ್: ಚಿಕ್ಕಬಳ್ಳಾಪುರ

Previous Post Next Post