ಗೋಲ್ಡನ್ ಫಿಫ್ಟಿ ಸಂಭ್ರಮದಲ್ಲಿ ಕರ್ನಾಟಕ: ರಾಜ್ಯ SSF ನ ಐತಿಹಾಸಿಕ ಹೆಜ್ಜೆ; "ಗೋಲ್ಡನ್ ಸಫಾರಿ" ಕರಾವಳಿ ಜಿಲ್ಲೆ ಪ್ರವೇಶ

ಗೋಲ್ಡನ್ ಫಿಫ್ಟಿ ಸಂಭ್ರಮದಲ್ಲಿ ಕರ್ನಾಟಕ: ರಾಜ್ಯ SSF ನ ಐತಿಹಾಸಿಕ ಹೆಜ್ಜೆ; "ಗೋಲ್ಡನ್ ಸಫಾರಿ" ಕರಾವಳಿ ಜಿಲ್ಲೆ ಪ್ರವೇಶ

ಉಡುಪಿ, ಜೂನ್ 11; ಅದೆಷ್ಟೋ ಯುವ ಸಮೂಹವನ್ನು ಧಾರ್ಮಿಕ ಚೌಕಟ್ಟಿನಲ್ಲಿ ನೆಲೆಯೂರಿ ನೈಜ ಆದರ್ಶದಲ್ಲಿ ಕಾರ್ಯಾಚರಣೆ ಮಾಡುವಲ್ಲಿ ಯಶಸ್ವಿಯಾದ ಸುನ್ನೀ ವಿದ್ಯಾರ್ಥಿ ಒಕ್ಕೂಟ ಎಸ್ಸೆಸ್ಸೆಫ್ 50ರ  ಸಂಭ್ರಮ.ಈ ಪ್ರಯುಕ್ತ ರಾಜ್ಯ ಎಸ್ಸೆಸ್ಸೆಫ್ ನಾಯಕರ "ಗೋಲ್ಡನ್ ಸಫಾರಿ"ಯ ಏಳನೇ ದಿನವಾದ ಜೂನ್ 11 ಆದಿತ್ಯವಾರ ಉಡುಪಿ ಜಿಲ್ಲೆಗೆ ಆಗಮಿಸಲಿದೆ.


ಬೆಳಿಗ್ಗೆ 07 ಗಂಟೆ ಬೈಂದೂರು ಡಿವಿಷನ್ ಕೋಯನಗರ, 10ಗಂಟೆಗೆ ಕುಂದಾಪುರ ಡಿವಿಷನ್ ಕೋಡಿ, ಮಧ್ಯಾಹ್ನ 02 ಗಂಟೆಗೆ ಉಡುಪಿ ಡಿವಿಷನ್ ದೊಡ್ಡಣಗುಡ್ಡೆ, 04 ಗಂಟೆಗೆ ಕಾಪು ಡಿವಿಷನ್ ಕನ್ನಂಗಾರ್, ಸಂಜೆ 07 ಗಂಟೆಗೆ ಕಾರ್ಕಳ ಡಿವಿಷನ್ ಬಂಗ್ಲೆಗುಡ್ಡೆ ಆಗಮಿಸಲಿದ್ದು, ಈ ಸಂಧರ್ಭಧಲ್ಲಿ ಗೋಲ್ಡನ್ ಸಫಾರಿಗೆ ಡಿವಿಷನ್ ಕೇೕದ್ರವಾಗಿ ನಡೆದ "ಸಕ್ಕರೆ ಸಂಗ್ರಹ" ಗೋಲ್ಡನ್ ಗಿಪ್ಟ್ ರೂಪದಲ್ಲಿ ರಾಜ್ಯ ನಾಯಕರಿಗೆ ಹಸ್ತಾಂತರಿಸಲಿದ್ದಾರೆ.


ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಉಸ್ತಾದ್ ಹಾಫಿಳ್ ಸುಫ್ಯಾನ್ ಸಖಾಫಿ ಮುನ್ನಡೆಸುವ ಯಾತ್ರೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಫ್ವಾನ್ ಚಿಕ್ಕಮಂಗಳೂರು, ಕೋಶಾಧಿಕಾರಿ ಕೆ.ಎಂ. ಮುಸ್ತಫ ನಈಮಿ ಹಿಮಮಿ ಹಾವೇರಿ, ರಾಜ್ಯ ಕ್ಯೂಡಿ ಕಾರ್ಯದರ್ಶಿ ಎಮ್ಮೆಸ್ಸೆಮ್ ಜುನೈದ್ ಹಿಮಾಮಿ ಸಖಾಫಿ ಚಿತ್ರದುರ್ಗ, ರಾಜ್ಯ ವಿಸ್ಡಮ್ ಕಾರ್ಯದರ್ಶಿ ಮುಜೀಬ್ ಕೊಡಗು, ರಾಜ್ಯ ಕ್ಯಾಬಿನೆಟ್ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಉಬೈದುಲ್ಲಾ ಮಂಗಳೂರು, ರಾಜ್ಯ ಸಿಸಿ ಕಾರ್ಯದರ್ಶಿ ಕೆಕೆ ಅಶ್ರಫ್ ಹಿಮಮಿ ಸಖಾಫಿ, ರಾಜ್ಯ ದಅವ ಕಾರ್ಯದರ್ಶಿ ಅನ್ವರ್ ಅಸದಿ, ರಾಜ್ಯ ಸಮಿತಿ ಸದಸ್ಯರಾದ ಕಮರುದ್ದೀನ್ ಸಖಾಫಿ ಕೊಡಗು, ಶರೀಫ್ ಚಿಕ್ಕಮಗಳೂರು, ಉಡುಪಿ ಜಿಲ್ಲಾ ಉಸ್ತುವಾರಿ ಹಮೀದ್ ತಲಪಾಡಿ, ರಾಜ್ಯ ಐಟಿ ಕಾರ್ಯದರ್ಶಿ ರಕೀಬ್ ಕನ್ನಂಗಾರ್, ರಾಜ್ಯ ಸದಸ್ಯ ನಿಝಾಮ್ ಪಡುಕೆರೆ, ಇಬ್ರಾಹಿಂ ಮಜೂರ್ ಸಾಥ್ ನೀಡಲಿದ್ದಾರೆ.


ಉಡುಪಿ ಜಿಲ್ಲೆಯ ಐದು ಡಿವಿಷನ್ ಕೇಂದ್ರಗಳಲ್ಲಿ ವಿವಿಧ ರೀತಿಯಲ್ಲಿ ರಾಜ್ಯ ನಾಯಕರನ್ನು ಭರ ಮಾಡಿಕೊಳ್ಳಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಒಂದು ಸ್ವೀಕಾರ ಸಂಭ್ರಮದಲ್ಲಿ ಆಯಾಯ ವ್ಯಾಪ್ತಿಯ ಶಾಖೆ, ಸೆಕ್ಟರ್, ಡಿವಿಷನ್ ಪ್ರತಿನಿಧಿಗಳು ಹಾಗೂ ಜೀ ಟೀಮ್ ಸನ್ನದ್ಧ ಪಡೆಗಳು ಹಾಜರಾಗಿ ಯಶಸ್ವಿಗೊಳಿಸಲು ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಮುಹಮ್ಮದ್ ಮುಸ್ತಫ ಸಖಾಫಿ,ಪ್ರಧಾನ ಕಾರ್ಯದರ್ಶಿ ತ್ವಾಹೀರ್ ಮೂಡುಗೋಪಾಡಿ, ಕೋಶಾಧಿಕಾರಿ ಶಾಹುಲ್ ಹಮೀದ್ ನಈಮಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಮೀಡಿಯಾ ವಿಭಾಗ ವರದಿ ಮಾಡಿದೆ.
Previous Post Next Post