ಹಿರಿಯ ವಿದ್ವಾಂಸ ಅಬ್ದುಲ್ ಕರೀಮ್ ಮುಸ್ಲಿಯಾರ್ ಕಟ್ಟತ್ತಾರ್ ವಫಾತ್
ಇನ್ನಾ ಲಿಲ್ಲಾಹ್...
ಹಿರಿಯ ವಿದ್ವಾಂಸ ಅಬ್ದುಲ್ ಕರೀಂ ಮುಸ್ಲಿಯಾರ್ ಕುಂಬ್ರ-88 ವರ್ಷ- (ಹಾಫಿಝ್ ವಹೀದ್ ನಈಮಿ ಅವರ ತಂದೆ) ಇದೀಗ ತಲಪಾಡಿ, ಕೆಸಿ ರೋಡ್ನಲ್ಲಿ ಅವರ ಅಳಿಯ ಬಶೀರ್ ಅಹ್ಸನಿ ತೋಡಾರ್ ಅವರ ಮನೆಯಲ್ಲಿ ನಿಧನರಾಗಿದ್ದಾರೆ. ಅವರು ಎರಡು ಗಂಡು, ಐದು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಬಳಗ ಶಿಷ್ಯಂದಿರನ್ನು ಅಗಲಿದ್ದಾರೆ.
ಬಹ್ರುಲ್ ಉಲೂಂ ಒ.ಕೆ ಉಸ್ತಾದರ ಶಿಷ್ಯರಾದ ಇವರು ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಸಹಪಾಠಿ (ಶರೀಕ್) ಕೂಡಾ ಆಗಿದ್ದರು, ಕೇರಳ ಕರ್ನಾಟಕದ ಹಲವಾರು ಮೊಹಲ್ಲಾಗಳಲ್ಲಿ ದಶಕಗಳ ಕಾಲ ದೀನೀ ಸೇವೆಗೈದ ಓರ್ವ ಸೂಫಿವರ್ಯರಾಗಿದ್ದರು.
ಅಲ್ಲಾಹು ಅವರಿಗೆ ಮಗ್ಫಿರತ್ ನೀಡಲಿ-ಅಮೀನ್
ಎಲ್ಲರೂ ವಿಶೇಷ ದುಆ ನಡೆಸಲು ವಿನಂತಿ
▪️ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್
21/7/23, 5.30pm