ನಾಳೆ (ಬುಧವಾರ) ಮುಹರ್ರಮ್ 1 - ಖಾಝಿ ಮಾಣಿ ಉಸ್ತಾದ್ ಘೋಷಣೆ
ಹಿಜರಿ ಹೊಸ ವರ್ಷ ಪ್ರಾರಂಭ
ಕೇರಳದ ಕಾಪಾಡ್ ಎಂಬಲ್ಲಿ ಮುಹರ್ರಮ್ ತಿಂಗಳ ಚಂದ್ರ ದರ್ಶನವಾಗಿದ್ದರಿಂದ ನಾಳೆ ದಿನಾಂಕ 19/07/23 ಬುಧವಾರ ಮುಹರ್ರಮ್ 1 ಆಗಿರುತ್ತದೆ ಹಾಗು ಮುಹರ್ರಮ್ 9 ಮತ್ತು 10 ತಾಸುಆಅ್ ಆಶುರಾಅ್ ದಿನಾಂಕ 27 ಮತ್ತು 28 ಗುರುವಾರ ಮತ್ತು ಶುಕ್ರವಾರ ಆಗಿರುತ್ತದೆ ಎಂದು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್, ಸಯ್ಯದ್ ಖಲೀಲ್ ಬುಖಾರಿ ತಙಳ್, ಖಾಝಿ ಸಯ್ಯದ್ ಕುರಾ ತಙಳ್, ಖಾಝಿ ಮಾಣಿ ಉಸ್ತಾದ್ ಘೋಷಿಸಿದ್ದಾರೆ. ಆ ದಿನ ಉಪವಾಸ ಕೈಗೊಳ್ಳಲು ಸುನ್ನತ್ತಿದೆ ಎಂದು ಖಾಝಿಗಳು ತಿಳಿಸಿದ್ದಾರೆ.