ಹೂಡೆ ದಾರುಸ್ಸಲಾಮ್ ಮಹಾಸಭೆ: ಅಶ್ರಫ್. ಜಿ. ಅಧ್ಯಕ್ಷರಾಗಿ ಪುನರಾಯ್ಕೆ
ಉಡುಪಿ: ಇಲ್ಲಿನ ಹೂಡೆ ದಾರುಸ್ಸಲಾಮ್ ಎಜುಕೇಶನ್ ಸೊಸೈಟಿ ಇದರ ವಾರ್ಷಿಕ ಮಹಾಸಭೆಯು ದಿನಾಂಕ 5-11-2023 ಆದಿತ್ಯವಾರ ಬೆಳಿಗ್ಗೆ ದಾರುಸ್ಸಲಾಮ್ ನೂತನ ಮದರಸದಲ್ಲಿ ಅಧ್ಯಕ್ಷರಾದ ಅಶ್ರಫ್. ಜಿ. ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಯ್ಯಿದ್ ಯೂಸುಫ್ ನವಾಝ್ ರವರು ದುಆ ಮೂಲಕ ಚಾಲನೆ ನೀಡಿದರು. ಬಿ.ಎಂ. ಜಾಫರ್ ರವರು ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಯ್ಯೂಮ್ ಲೆಕ್ಕ ಪತ್ರ ಮಂಡಿಸಿದರು.
ಬಳಿಕ ಮುಂದಿನ ಎರಡು ವರ್ಷದ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಶ್ರಫ್. ಜಿ.ಯವರು ಅವಿರೋಧವಾಗಿ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಜುನೈದ್, ಕೋಶಾಧಿಕಾರಿಯಾಗಿ ಶೈಖ್ ಝುಲ್ಫಿಕರ್ ಅಹ್ಮದ್ ರವರು ಆಯ್ಕೆಯಾದರು. ಒಟ್ಟು 17 ಮಂದಿಯನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಕೊನೆಯಲ್ಲಿ ಸ್ವಲಾತ್'ನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.