ಶಮಿ ದಾಳಿಗೆ ಕಿವಿಸ್ ಉಡೀಸ್; ಭಾರತದ ಮುಂದುವರಿದ ಅಜೇಯ ಓಟ: ಫೈನಲ್ ಗೆ ಲಗ್ಗೆ

ಶಮಿ ದಾಳಿಗೆ ಕಿವಿಸ್ ಉಡೀಸ್; ಭಾರತದ ಮುಂದುವರಿದ ಅಜೇಯ ಓಟ: ಫೈನಲ್ ಗೆ ಭಾರತ


ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ 70 ರನ್ ಗಳ ಗೆಲುವು ಸಾಧಿಸಿದೆ.


ಮುಹಮ್ಮದ್ ಶಮಿ ಶಿಸ್ತುಬದ್ದ ಬೌಲಿಂಗ್ ದಾಳಿ ವಿರಾಟ್ ಮತ್ತು ಶ್ರೇಯಸ್ ಅಮೋಘ ಶತಕದ ನೆರವಿನಿಂದ ಭಾರತ ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ಮಣಿಸಿ ಕಳೆದ ಬಾರಿಯ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ. ಈ ಬಾರಿ ಫೈನಲ್ ಪ್ರವೇಶಿಸಿದೆ. ಭಾರತದ ಪರ ಶ್ರೇಷ್ಟ ಸಾಧನೆ ಮಾಡಿದ ಮುಹಮ್ಮದ್ ಶಮಿ 7 ವಿಕೆಟ್ ಪಡೆದುಕೊಂಡರು. ಬುಮ್ರಾ ಸಿರಾಜ್ ಹಾಗೂ ಕುಲ್ ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದುಕೊಂಡರು.

Previous Post Next Post