ಜನವರಿ 26 ರಂದು ಕುಂಬ್ರ ಮರ್ಕಝ್‌ನಲ್ಲಿ 'ಸಿಲ್ವರಿಯಂ ' ಘೋಷಣಾ ಸಮಾವೇಶ ಹಾಗೂ ಕಟ್ಟಡ ಶಿಲಾನ್ಯಾಸ

ಜನವರಿ 26 ರಂದು ಕುಂಬ್ರ ಮರ್ಕಝ್‌ನಲ್ಲಿ  'ಸಿಲ್ವರಿಯಂ ' ಘೋಷಣಾ ಸಮಾವೇಶ ಹಾಗೂ ಕಟ್ಟಡ ಶಿಲಾನ್ಯಾಸ
ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇಪ್ಪತ್ತ ಮೂರು ಯಶಸ್ವೀ ವರ್ಷಗಳನ್ನು  ಪೂರ್ತಿಮಾಡಿ ಇಪ್ಪತ್ತನಾಲ್ಕನೇ ವರ್ಷಕ್ಕೆ ಕಾಲಿಡುವಾಗ ಸಿಲ್ವರಿಯಂ ಎಂಬ ಹೆಸರಲ್ಲಿ ಎರಡು ವರ್ಷಗಳ ಕಾಲ ಬೆಳ್ಳಿ ಹಬ್ಬ ಆಚರಿಸಲು ನಿರ್ಧರಿಸಲಾಗಿದ್ದು ಇದರ ಘೋಷಣೆ ಹಾಗೂ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯವು ಜನವರಿ ಇಪ್ಪತ್ತಾರು ಶುಕ್ರವಾರ ಅಪರಾಹ್ನ ನಾಲ್ಕು ಗಂಟೆಗೆ ಕುಂಬ್ರ ಮರ್ಕಝ್ ಆವರಣದಲ್ಲಿ ನಡೆಯಲಿದೆ. ಶಿಲಾನ್ಯಾಸ ಹಾಗೂ ಸಿಲ್ವರಿಯಂ "ನ  ಉದ್ಘಾಟನೆಯನ್ನು ವಿಶ್ವ ವಿಖ್ಯಾತ ಮರ್ಕಝ್ ಸಖಾಫತಿ ಸ್ಸುನ್ನಿಯ್ಯದ ಅಧ್ಯಕ್ಷ , ಸಮಸ್ತ ಮುಶಾವರದ ಉಪಾಧ್ಯಕ್ಷ ಅಮೀನುಶ್ಶರೀಅ ಸಯ್ಯಿದ್ ಅಲೀ ಬಾಫಖೀಹ್ ತಂಙಳ್ ನಿರ್ವಹಿಸಲಿದ್ದಾರೆ.
 ಅದರೊಂದಿಗೆ ಸಂಸ್ಥೆಯ ನೂತನ ಲೋಗೊವನ್ನು ಪ್ರಕಾಶನ ಮಾಡಲಾಗುವುದು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರಮುಖ ಅನಿವಾಸಿ ಉದ್ಯಮಿ, ಮುಸ್ಲಿಮ್ ಮುಂದಾಳು ಸೌದಿ ಅರೇಬಿಯಾ ಜುಬೈಲ್ ನ ' ಆಲ್ ಮುಝೈನ್ ಉದ್ಯಮ ಸಂಸ್ಥೆಯ ಅಧ್ಯಕ್ಷ ಹಾಜಿ ಝಕರಿಯಾ ಜೋಕಟ್ಟೆ, ಕಾಟಿಪಳ್ಳ ಮಿಸ್ಬಾಹ್ ಮಹಿಳಾ ಕಾಲೇಜಿನ ಅಧ್ಯಕ್ಷ ಹಾಜಿ ಮಮ್ತಾಝ್ ಅಲಿ ಕೃಷ್ಣಾಪುರ, ಕುಂಬ್ರ  ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಹಾಜಿ ಕೆ ಪಿ ಅಹ್ಮದ್ ಆಕರ್ಷಣ್, ದ.ಕ.ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್,  ಮರ್ಕಝುಲ್ ಹುದಾ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಫಾರೂಖ್ ಕನ್ಯಾನ, ಉದ್ಯಮಿ, ಸುನ್ನೀ ಮುಂದಾಳು ಹಾಜಿ ಶಕೀರ್ ಹೈಸಮ್ , ಮೀಫ್ ಉಪಾಧ್ಯಕ್ಷ ಕೆ ಎಂ ಮುಸ್ತಫಾ ಸುಳ್ಯ ಹಾಗೂ ಇತರ ಪ್ರಮುಖರು, ಅನಿವಾಸಿ ಘಟಕಗಳ ನಾಯಕರು ಭಾಗವಹಿಸುವರು.

ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಅರಿಯಡ್ಕ ಅಧ್ಯಕ್ಷತೆ ವಹಿಸಲಿದ್ದು ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಸಹಕರಿಸಬೇಕೆಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಶೀರ್ ಇಂದ್ರಾಜೆ ತಿಳಿಸಿದ್ದಾರೆ.
Previous Post Next Post