ಎಸ್ಸೆಸ್ಸೆಫ್ ಸುನ್ನೀ ಸಾಹಿತ್ಯ ಪ್ರಶಸ್ತಿಗೆ ಸ್ವಾಲಿಹ್ ತೋಡಾರ್ ಆಯ್ಕೆ
ಎಸ್ಸೆಸ್ಸೆಫ್ ಸುನ್ನೀ ಸಾಹಿತ್ಯ ಪ್ರಶಸ್ತಿಗೆ ಸ್ವಾಲಿಹ್ ತೋಡಾರ್ ಆಯ್ಕೆ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ವತಿಯಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ನೀಡುವ ಸುನ್ನೀ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಬರಹಗಾರ ಸ್ವಾಲಿಹ್ ತೋಡಾರ್ ರವರನ್ನು ಆಯ್ಕೆ ಮಾಡಲಾಗಿದೆ.
ಸುನ್ನೀ ಸಾಹಿತ್ಯ ಕ್ಷೇತ್ರಕ್ಕೆ ಬಹಳಷ್ಟು ಪುಸ್ತಕಗಳನ್ನು ಬರೆದು ಸಮರ್ಪಿಸಿದ್ದಲ್ಲದೆ ಇತ್ತೀಚೆಗೆ ಬರೆದ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ಎಂಬ ಅತ್ಯಮೂಲ್ಯ ಬೃಹತ್ ಗ್ರಂಥವನ್ನು ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ. ಎಸ್ಸೆಸ್ಸೆಫ್ ರಾಜ್ಯ ಸಮಿತಿ ನೇಮಕ ಮಾಡಿದ ಎಸ್ ಪಿ ಹಂಝ ಸಖಾಫಿ, ಅಬ್ದುಲ್ ಹಮೀದ್ ಬಜ್ಪೆ, ಕೆಎಂ ಅಬೂಬಕ್ಕರ್ ಸಿದ್ದೀಕ್, ಜಿಎಂ ಕಾಮಿಲ್ ಸಖಾಫಿ ರವರನ್ನು ಒಳಗೊಂಡ ಆಯ್ಕೆ ಸಮಿತಿ ಸ್ವಾಲಿಹ್ ತೋಡಾರ್ ರವರನ್ನು ಆಯ್ಕೆ ಮಾಡಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ತಿಳಿಸಿದೆ.