ಡಾ. ಝೈನೀ ಕಾಮಿಲ್ ಅವರಿಗೆ ರಿಯಾದ್ ಏರ್ಪೋರ್ಟ್‌ನಲ್ಲಿ ಸ್ವಾಗತ
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದರ ಪ್ರಚಾರರ್ಥ ಸೌದಿ ಅರೇಬಿಯಾ ತಲುಪಿದ ಸಂಸ್ಥೆಯ ಉಪಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರಿಗೆ ರಿಯಾದ್ ಕಿಂಗ್ ಖಾಲಿದ್ ಇಂಟರ್ನ್ಯಾಷನಲ್ ಏರ್ಪೋರ್ಟ್‌ನಲ್ಲಿ ಮರ್ಕಝುಲ್ ಹುದಾ ರಿಯಾದ್ ಘಟಕದ ವತಿಯಿಂದ ಸ್ವಾಗತ ಕೋರಲಾಯಿತು.
ಮರ್ಕಝುಲ್ ಹುದಾ ರಿಯಾದ್ ಘಟಕದ ಅಧ್ಯಕ್ಷ ಅಶ್ರಫ್ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೆ. ಎಂ. ಎಸ್.ನೀರಕಟ್ಟೆ, ಕೋಶಾಧಿಕಾರಿ ಟಿ ಎಚ್ ಹಬೀಬ್ ತೆಕ್ಕಾರ್, ಸಮಿತಿಯ ಪ್ರಮುಖರಾದ ಅಬ್ದುಲ್ ರಝಾಕ್ ಬಾರ್ಯ, ಇಲ್ಯಾಸ್ ಲತೀಫಿ, ಅಬ್ದುಲ್ ರಝಾಕ್ ಮುಸ್ಲಿಯಾರ್ ಮುಡಿಪು, ಅಬ್ದುಸ್ಸಲಾಂ ಎಣ್ಮೂರು, ಮುಷ್ತಾಕ್ ಸಕಲೇಶಪುರ ಮುಂತಾದವರು ಉಪಸ್ಥಿತರಿದ್ದರು.
ಸೌದಿ ಅರೇಬಿಯಾದ ವಿವಿದ ಪ್ರದೇಶಗಳಲ್ಲಿ ಪರ್ಯಟನೆ ನಡೆಸಲಿರುವ ಝೈನಿ ಅವರು ಆಲ್ಲಿ ನಡೆಯುವ ಸಮಿತಿಗಳ ವಾರ್ಷಿಕ ಸಂಗಮಗಳಲ್ಲಿ ಪಾಲ್ಗೊಂಡು ಮುಖ್ಯ ಭಾಷಣ ಮಾಡಲಿದ್ದಾರೆಂದು ಸಂಸ್ಥೆಯ ಸೌದಿ ಅರೇಬಿಯಾ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ರಫ್ ನೌಶಾದ್ ಪೋಲ್ಯ ತಿಳಿಸಿದ್ದಾರೆ.