ಎಸ್ಸೆಸ್ಸೆಫ್: ಕೋಲಾರ ಜಿಲ್ಲಾ ಸಮಿತಿ ರಚನೆ

ಎಸ್ಸೆಸ್ಸೆಫ್: ಕೋಲಾರ ಜಿಲ್ಲಾ ಸಮಿತಿ ರಚನೆ
ಕೋಲಾರ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಇದರ ಕೋಲಾರ ಜಿಲ್ಲಾ ಸಮಿತಿ ರಚನೆ ಬಂಗಾರಪೇಟೆಯಲ್ಲಿ ನಡೆಯಿತು. 

 ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಸಖಾಫಿ ಹರಿಹರ ಉದ್ಘಾಟಿಸಿದರು. ಜುನೈದ್ ಹಿಮಮಿ ಅಸ್ಸಖಾಫಿ ಚಿತ್ರದುರ್ಗ ಪ್ರಾಸ್ತಾವಿಕವಾಗಿ ಮಾತನಾಡಿದರು. 
  
ಕೋಲಾರ ಜಿಲ್ಲಾ ಅಧ್ಯಕ್ಷರಾಗಿ ಮೌಲಾನಾ ಅಬ್ದುಲ್ಲಾ ಖಾದಿರಿ ಬಂಗಾರಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಫ್ರೀದ್ ಕೋಲಾರ, ಫಿನಾನ್ಸ್ ಕಾರ್ಯದರ್ಶಿಯಾಗಿ ಸಯ್ಯಿದ್ ಅಝ್‌ಹರುದ್ದೀನ್ ಹಿಮಮಿ ರವರನ್ನು ಆಯ್ಕೆ ಮಾಡಲಾಯಿತು. 
 
ಕ್ಯಾಂಪಸ್ ಕಾರ್ಯದರ್ಶಿಯಾಗಿ ಝೈನುದ್ದೀನ್, ಇತರ ಕಾರ್ಯದರ್ಶಿಗಳಾಗಿ ಹಸನ್ ಸಖಾಫಿ, ಖಮರುದ್ದೀನ್ ಖಾದಿರಿ, ಅಬೂ ತ್ವಾಹಿರ್, ಅಬೂಬಕ್ಕರ್ ಸಿದ್ದೀಕ್, ಅರ್ಬಾಝ್ , ರಿಶಾಲ್ ಕೆಜಿಎಫ್ ರವರನ್ನು ಹಾಗೂ ಏಳು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
Previous Post Next Post