ಆರನೇ ಹಂತದ ಲೋಕಸಭಾ ಚುನಾವಣೆ: ಮತದಾನ ಆರಂಭ
ಮೇ 25: ಭಾರತದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯು ಅಂತಿಮ ಘಟ್ಟದತ್ತ ಸಾಗಿದೆ. ಇಂದು ಶನಿವಾರ (ಮೇ 25) ದೇಶದ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಎಂಟು ರಾಜ್ಯಗಳಲ್ಲಿ 6ನೇ ಹಂತದ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಸಂಜೆ 5ರವರೆಗೆ ಮತದಾರರು ಮತ ಚಲಾಯಿಸಲಿದ್ದಾರೆ.
ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವೋಟಿಂಗ್ ನಡೆಯಲಿದೆ. ಉತ್ತರ ಪ್ರದೇಶದ 14 ಸ್ಥಾನಗಳು, ಪಶ್ಚಿಮ ಬಂಗಾಳದ 8 ಕ್ಷೇತ್ರಗಳು, ಬಿಹಾರ 8 ಕ್ಷೇತ್ರಗಳು, ಒಡಿಶಾದ 6, ಜಾರ್ಖಂಡ್ನ 4 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.
ಆರನೇ ಹಂತ ಮುಕ್ತಾಯಗೊಂಡಲ್ಲಿ ಮತ್ತೊಂದು ಹಂತದ ಚುನಾವಣೆ ಮಾತ್ರ ಬಾಕಿ ಉಳಿದಿದ್ದು, ಜೂನ್ 1ರಂದು 7ನೇ ಹಾಗೂ ಕೊನೆಯ ಹಂತದ ಚುನಾವಣೆ ನಡೆಯಲಿದೆ. ಜೂನ್ 4ರಂದು ಎಲ್ಲಾ 7 ಹಂತಗಳ ಫಲಿತಾಂಶ ಪ್ರಕಟವಾಗಲಿದೆ.
ಬಿಹಾರದ 8, ಉತ್ತರ ಪ್ರದೇಶದ 14, ಒಡಿಶಾ 6, ಪಶ್ಚಿಮ ಬಂಗಾಳ 8, ಜಾರ್ಖಂಡ್ 4, ದೆಹಲಿಯ 7, ಹರಿಯಾಣದ 10, ಜಮ್ಮು ಮತ್ತು ಕಾಶ್ಮೀರದ 1 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ, ಮನೇಕಾ ಗಾಂಧಿ, ಮೆಹಬೂಬಾ ಮುಫ್ತಿ, ಸಂಬಿತ್ ಪಾತ್ರ, ಅಭಿಜಿತ್ ಗಂಗೂಲಿ, ಕನ್ಹಯ್ಯಾ ಕುಮಾರ್, ಬಾನ್ಸುರಿ ಸ್ವರಾಜ್ ಸೇರಿದಂತೆ ಹಲವು ಪ್ರಮುಖರ ಭವಿಷ್ಯ ಇಂದು ನಿರ್ಧಾರವಾಗಲಿದೆ.