ಯಾವ ರಾಜ್ಯದಲ್ಲಿ ಎಷ್ಟು ಮತದಾನ?
ಸಂಜೆ 5 ಗಂಟೆ ಸುಮಾರಿಗೆ ಆಂಧ್ರಪ್ರದೇಶದಲ್ಲಿ ಶೇ.68.04, ಬಿಹಾರ ಶೇ.54.14, ಜಮ್ಮು ಮತ್ತು ಕಾಶ್ಮೀರ ಶೇ.35.75, ಜಾರ್ಖಂಡ್ ಶೇ.63.14, ಮಧ್ಯಪ್ರದೇಶ ಶೇ.68.01, ಮಹಾರಾಷ್ಟ್ರ ಶೇ.52.49, ಒಡಿಶಾ ಶೇ.62.96, ತೆಲಂಗಾಣ ಶೇ.61.16, ಉತ್ತರ ಪ್ರದೇಶ ಶೇ.56.35, ಪಶ್ಚಿಮ ಬಂಗಾಳದಲ್ಲಿ ಶೇ.75.66ರಷ್ಟು ಮತದಾನ ದಾಖಲಾಗಿದೆ. ದೇಶದ ಹಲವೆಡೆ ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು.
ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಐದನೇ ಹಂತದ ಮತದಾನವು ಮೇ 20ರಂದು ನಡೆಯಲಿದೆ. ಜೂನ್ 1ರಂದು ಕೊನೆಯ ಅಥವಾ ಏಳನೇ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.