ದೇಶ ಯಾವ ಕಡೆ!? ಯಾರು ಭಾರತದ ಬಾದುಷಾ!!ಕುತೂಹಲ ಕಾತರ ಆತಂಕ... ಸ್ಟ್ರಾಂಗ್ ರೂಮ್ ಓಪನ್

ದೇಶ ಯಾವ ಕಡೆ!? ಯಾರು  ಭಾರತದ ಬಾದುಷಾ!!

ಕುತೂಹಲ ಕಾತರ ಆತಂಕ... ಸ್ಟ್ರಾಂಗ್ ರೂಮ್ ಓಪನ್


ಹೊಸದಿಲ್ಲಿ: ಜಗತ್ತಿನ ಅತೀ ದೊಡ್ಡ ಚುನಾವಣೆಯ ಫ‌ಲಿತಾಂಶದ ಕುತೂಹಲಕ್ಕೆ ಮಂಗಳವಾರ ತೆರೆ ಬೀಳಲಿದೆ. ಸುಮಾರು 82 ದಿನಗಳ ಕಾಲ ನಡೆದ ಸುದೀರ್ಘ‌ ಲೋಕಸಭೆ ಚುನಾವಣೆಯ ಮತ ಎಣಿ ಕೆ ಪ್ರಕ್ರಿಯೆಗಳು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಚುನಾವಣ ಆಯೋಗವು ಮತ ಎಣಿಕೆಗೆ ಬೇಕಾಗಿರುವ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.


543 ಲೋಕಸಭಾ ಕ್ಷೇತ್ರಗಳಿಗಾಗಿ ಒಟ್ಟು 8,360 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರ ಹಣೆಬರಹ ಇಂದೇ ತಿಳಿಯಲಿದೆ. ಆಂಧ್ರ ಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆ, 25 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫ‌ಲಿತಾಂಶವೂ ಇಂದು ಹೊರಬೀಳಲಿದೆ.

ಎ. 19ರಿಂದ ಜೂ. 1ರ ವರೆಗೆ ಒಟ್ಟು 7 ಹಂತದಲ್ಲಿ ಲೋಕಸಭೆಗೆ ಚುನಾವಣೆ ನಡೆದಿತ್ತು. ಪ್ರಸಕ್ತ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ 3ನೇ ಬಾರಿಗೆ ಅಧಿಕಾರಕ್ಕೇರಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ “ಹ್ಯಾಟ್ರಿಕ್‌’ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಮತಗಟ್ಟೆ ಸಮೀಕ್ಷೆಗಳೂ ಬಿಜೆಪಿ 3ನೇ ಅವಧಿಗೆ ಸರಕಾರ ರಚಿಸುವ ಭವಿಷ್ಯವನ್ನು ನುಡಿದಿವೆ. ಮತ್ತೂಂದೆಡೆ ಕಾಂಗ್ರೆಸ್‌ ನೇತೃತ್ವದಲ್ಲಿ ಒಂದಾಗಿರುವ 23 ಪಕ್ಷಗಳ ಐಎನ್‌ಡಿಐಎ ಒಕ್ಕೂಟವು ಅಚ್ಚರಿಯ ಫ‌ಲಿತಾಂಶವನ್ನು ಎದುರು ನೋಡುತ್ತಿದೆ.


ಬೆಳಗ್ಗೆ 8 ಗಂಟೆಗೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯಲಿದೆ. ಬಳಿಕ ವಿದ್ಯುನ್ಮಾನ ಮತಯಂತ್ರಗಳಲ್ಲಿರುವ ಮತ ಗಳನ್ನು ಲೆಕ್ಕ ಹಾಕಲಾಗುತ್ತದೆ. ಬೆಳಗ್ಗೆ 10 ಗಂಟೆಯ ಸುಮಾರಿಗೆ ಚುನಾವಣೆ ಫ‌ಲಿತಾಂಶದ ಆರಂಭಿಕ ಚಿತ್ರಣ ದೊರೆತರೆ, ಮಧ್ಯಾಹ್ನ 12 ಗಂಟೆ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಬಹುದು. ಇವಿಎಂ ಮತ ಗಳೊಂದಿಗೆ ವಿವಿ ಪ್ಯಾಟ್‌ ತಾಳೆ ಹಾಕಬೇಕಾದ್ದ ರಿಂದ ಅಧಿಕೃತ ಚಿತ್ರಣವು ಸಂಜೆ 6 ಗಂಟೆ ವೇಳೆಗೆ ಹೊರಬೀಳುವ ನಿರೀಕ್ಷೆ ಇದೆ.

Previous Post Next Post