ನಾಳೆ ಇಂಡಿಯಾ ಒಕ್ಕೂಟ ಸಭೆ: ಸರ್ಕಾರ ರಚಿಸಲು ಪ್ರಯತ್ನ

ನಾಳೆ ಇಂಡಿಯಾ ಒಕ್ಕೂಟ ಸಭೆ: ಸರ್ಕಾರ ರಚಿಸಲು ಪ್ರಯತ್ನ 


ನವದೆಹಲಿ: ಕಳೆದ ಬಾರಿ ಹೀನಾಯವಾಗಿ ಸೋಲುಂಡಿದ್ದ ಕಾಂಗ್ರೆಸ್​ ಈ ಬಾರಿ ಪುಟಿದ್ದೆದ್ದಿದ್ದು, ಆಡಳಿತಾರೂಢ ಬಿಜೆಪಿಗೆ ಟಕ್ಕರ್​ ಕೊಡುತ್ತಿದೆ. ಲೊಕಸಭಾ ಚುನಾವಣೆಯ ಮತಎಣಿಕೆಯಲ್ಲಿ ಈ ಬಾರಿ ಇಂಡಿ ಒಕ್ಕೂಟ 235 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದು, ಸರ್ಕಾರ ರಚನೆಯ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ.


ಇಂಡಿ ಒಕ್ಕೂಟ ಈಗಾಗಲೇ ಸರ್ಕಾರ ರಚನೆಗೆ ಪ್ರಯತ್ನವನ್ನು ಆರಂಭಿಸಿದ್ದು, ಎನ್​ಡಿಎ ಮೈತ್ರಿಕೂಟವಾದ ಬಿಹಾರದ ಜೆಡಿಯು ಮತ್ತು ಟಿಡಿಪಿ ಜತೆ ಮಾತುಕತೆಯನ್ನು ನಡೆಸಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

545 ಸ್ಥಾನಗಳನ್ನು ಹೊಂದಿರುವ ಲೋಕಸಭೆಯಲ್ಲಿ ಸರ್ಕಾರ ರಚಿಸಲು 272 ಸ್ಥಾನಗಳ ಬಹುಮತವನ್ನು ಸಾಧಿಸಬೇಕಾಗಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟ 290 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೂ ಕೂಡ ಬಿಜೆಪಿ ಏಕಾಂಗಿಯಾಗಿ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಸರ್ಕಾರ ರಚನೆಗೆ ಮೈತ್ರಿ ಪಕ್ಷಗಳನ್ನು ಅವಲಂಬಿಸಬೇಕಾಗಿದೆ.

ಇತ್ತ ಇಂಡಿ ಒಕ್ಕೂಟ 235 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಬಹುಮತಕ್ಕೆ 45 ಸ್ಥಾನಗಳು ಬೇಕಾಗಿದ್ದು, ಈಗಲೂ ಕೂಡ ಸರ್ಕಾರ ರಚನೆಯ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ. ಸದ್ಯ ಸರ್ಕಾರ ರಚನೆಯ ಕಸರತ್ತನ್ನು ಇಂಡಿ ಒಕ್ಕೂಟ ಆರಂಭಿಸಿದ್ದು, ಎನ್​ಡಿಎ ಮೈತ್ರಿ ಪಕ್ಷಗಳ ಜತೆ ಮಾತುಕತೆ ನಡೆಸಲಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್​ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಮತ್ತು ಟಿಡಿಪಿ ಜತೆ ಮಾತನಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.



Previous Post Next Post