ಲಬ್ಬೈಖಿನ ಮಂತ್ರ ಧ್ವನಿಯೊಂದಿಗೆ ಮಿನಾದಲ್ಲಿ ರಾತ್ರಿ ತಂಗಿದ ಹಾಜಿಗಳು, ನಾಳೆ ಅರಫಾ ಸಂಗಮ
ಮಕ್ಕಾ: ಪ್ರವಾದಿ ಖಲೀಲುಲ್ಲಾ ಇಬ್ರಾಹಿಂ (ಅ) ಮತ್ತು ಪ್ರೀತಿಯ ಮಗ ಇಸ್ಮಾಯಿಲ್ (ಅ) ಅವರ ತ್ಯಾಗದ ಸ್ಮರಣೆಯನ್ನು ಪುನರುಚ್ಛರಿಸುವ ಮೂಲಕ ಈ ವರ್ಷದ ಪವಿತ್ರ ಹಜ್ ಕರ್ಮಕ್ಕೆ ಚಾಲನೆ ನೀಡಲಾಗಿದೆ. ಹಜ್ಜಾಜ್ ಗಳು ನಿನ್ನೆ ಮೀನಾದಲ್ಲಿ ರಾತ್ರಿ ತಂಗಿದ್ದು ಲಬ್ಬೈಖಿನ ಮಂತ್ರ ಧ್ವನಿಯನ್ನು ಪಠಿಸುತ್ತಿದ್ದಾರೆ. ಇಂದು ರಾತ್ರಿ ಮೀನಾದಿಂದ ಅರಫಾದತ್ತ ಹಾಜಿಗಳು ತೆರಳಿದ್ದಾರೆ.'ಲಬ್ಬೈಕಲ್ಲಾಹುಮ್ಮ ಲಬ್ಬೈಕ್' ಅಲ್ಲಾಹನೇ ನಿಮ್ಮ ಕರೆಗೆ ಓಗೊಟ್ಟು ಪುಣ್ಯಭೂಮಿಯನ್ನು ತಲುಪಿದ್ದೇವೆ ಎಂದು ತಲ್ಬಿಯತಿನ ಮಂತ್ರಗಳನ್ನು ಪಠಿಸುತ್ತಾ ಮಕ್ಕಾದಿಂದ ಡೇರೆಗಳ ನಗರವಾದ ಮಿನಾಗೆ ಬುಧವಾರದಿಂದ ಹಾಜಿಗಳು ಆಗಮಿಸಿದ್ದರು. ನಿನ್ನೆ ಮಿನಾದಲ್ಲಿ ರಾತ್ರಿ ತಂಗಿದ ಹಾಜಿಗಳು ನಾಳೆ ಅರಫಾ ಮೈದಾನದತ್ತ ತೆರಳಲಿದ್ದಾರೆ.