ಇಂದು ಐತಿಹಾಸಿಕ ಅರಫಾ ಸಂಗಮ: ಮಿನಾದಿಂದ ಅರಫಾ ಮೈದಾನದತ್ತ ಹಾಜಿಗಳ ಹರಿವು
ಜಗತ್ತಿನ ಅತೀದೊಡ್ಡ ವಿಶ್ವಾಸಿ ಸಂಗಮವಾಗಿದೆ ಅರಫಾ. ತಲ್ಬಿಯತ್ ಹೇಳುತ್ತಾ ಹಾಜಿಗಳು ಬುಧವಾರದಿಂದಲೇ ಮಿನಾಗೆ ತಲುಪುತಿದ್ದರು. ನಿನ್ನೆ ಸಂಜೆಯೊಂದಿಗೆ ಎಲ್ಲಾ ಹಾಜಿಗಳು ಮಿನಾ ತಲುಪಿದರು. ಹಜ್ಜ್ ಕರ್ಮದ ಎರಡನೇ ದಿನವಾಗಿರುತ್ತದೆ ಅರಫಾ ಸಂಗಮ. ಇಂದು ಳುಹರ್ ಮತ್ತು ಅಸರ್ ನಮಾಝ್ ಹಾಜಿಗಳು ಅರಫಾದಲ್ಲಿ ನಿರ್ವಹಿಸುತ್ತಾರೆ. ಸೂಯ್ರಾಸ್ತಮಾನದವರೆಗೆ ಇಬಾದತ್ ನಲ್ಲಿ ಮುಳುಗುತ್ತಾರೆ.
ಅರಫಾ ಖುತುಬಾ ಮತ್ತು ನಮಾಝಿಗೆ ಸೌದಿ ಅರೇಬಿಯಾದ ಉನ್ನತ ಪಂಡಿತರು ನೇತೃತ್ವ ನೀಡಲಿದ್ದಾರೆ.