ನಿಮಗಿನ್ನು ಇಬ್ಬರು ಸಂಸದರು: ವಯನಾಡಿನ ಜನತೆಗೆ ರಾಹುಲ್ ಗಾಂಧಿ ಭಾವನಾತ್ಮಕ ಸಂದೇಶ

ನಿಮಗಿನ್ನು ಇಬ್ಬರು ಸಂಸದರು: ವಯನಾಡಿನ ಜನತೆಗೆ ರಾಹುಲ್ ಗಾಂಧಿ ಭಾವನಾತ್ಮಕ ಸಂದೇಶ
ನವದೆಹಲಿ: ಕೇರಳದ ವಯನಾಡಿನ ಬದಲು ಉತ್ತರ ಪ್ರದೇಶದಲ್ಲಿ ತಮ್ಮ ಕುಟುಂಬದ ಭದ್ರಕೋಟೆಯಾಗಿರುವ ರಾಯ್ ಬರೇಲಿ ಕ್ಷೇತ್ರವನ್ನು ರಾಹುಲ್ ಗಾಂಧಿ ಉಳಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಘೋಷಿಸಿದೆ. ಅವರಿಂದ ತೆರವಾಗುವ ವಯನಾಡಿನಿಂದ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ಮೂಲಕ ಕೇರಳದಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ. ಈ ಬೆಳವಣಿಗೆಯ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ ವಯನಾಡ್ ತೊರೆಯುವುದು ಬಹಳ ಕಠಿಣ ನಿರ್ಧಾರವಾಗಿದೆ ಎಂದಿದ್ದಾರೆ.

ರಾಯ್​ಬರೇಲಿ ಮತ್ತು ವಯನಾಡು ಎರಡೂ ನನಗೆ ಆಪ್ತವಾದ ಕ್ಷೇತ್ರಗಳು. ಇದು ಬಹಳ ಕಠಿಣವಾದ ನಿರ್ಧಾರವಾಗಿತ್ತು. ಇನ್ನು ವಯನಾಡಿನ ಜನರಿಗೆ ನನ್ನ ಪರವಾಗಿ ಪ್ರಿಯಾಂಕಾ ಕೆಲಸ ಮಾಡಲಿದ್ದಾರೆ. ನನ್ನ ಹಿಂದಿನ ಲೋಕಸಭೆ ವಾದ ವಯನಾಡಿಗೆ ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ. ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಗೆಲ್ಲುತ್ತಾರೆ ಎಂಬ ನಂಬಿಕೆ ನನಗಿದೆ. ವಯನಾಡ್ ಜನರು ಇನ್ನುಮುಂದೆ ಇಬ್ಬರು ಸಂಸದರನ್ನು ಹೊಂದಿದ್ದಾರೆಂದು ಭಾವಿಸಬಹುದು ಎಂದು ಅವರು ಹೇಳಿದ್ದಾರೆ.


'ನನಗೆ ವಯನಾಡ್ ಮತ್ತು ರಾಯ್ ಬರೇಲಿಯೊಂದಿಗೆ ಭಾವನಾತ್ಮಕ ಸಂಬಂಧವಿದೆ. ನಾನು ಕಳೆದ 5 ವರ್ಷಗಳಿಂದ ವಯನಾಡಿನ ಸಂಸದನಾಗಿದ್ದೆ. ಅಲ್ಲಿನ ಜನರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಆದರೆ ನಾನು ಸಹ ಆಗಾಗ ಭೇಟಿ ನೀಡುತ್ತೇನೆ. ನಾನು ರಾಯ್‌ಬರೇಲಿಯೊಂದಿಗೆ ಹಳೆಯ ಸಂಬಂಧವನ್ನು ಹೊಂದಿದ್ದೇನೆ, ನಾನು ಅವರನ್ನು ಮತ್ತೆ ಪ್ರತಿನಿಧಿಸುತ್ತೇನೆ ಎಂದು ನನಗೆ ಸಂತೋಷವಾಗಿದೆ. ಆದರೆ ಇದು ಕಠಿಣ ನಿರ್ಧಾರವಾಗಿತ್ತು ಎಂದು ಅವರು ಹೇಳಿದ್ದಾರೆ.
Previous Post Next Post