ಬಾಹ್ಯಾಕಾಶದಲ್ಲಿ ತುರ್ತು ಪರಿಸ್ಥಿತಿ: ಸ್ಟಾರ್ ಲೈನರ್ ನಲ್ಲಿ ಆಶ್ರಯ ಪಡೆಯಲು ಗಗನಯಾತ್ರಿ ಸುನೀತಾ ವಿಲಿಯಮ್ಸ್ ಗೆ ನಾಸಾ ಆದೇಶ

ಬಾಹ್ಯಾಕಾಶದಲ್ಲಿ ತುರ್ತು ಪರಿಸ್ಥಿತಿ: ಸ್ಟಾರ್ ಲೈನರ್ ನಲ್ಲಿ ಆಶ್ರಯ ಪಡೆಯಲು ಸುನೀತಾ ವಿಲಿಯಮ್ಸ್ ಗೆ ನಾಸಾ ಆದೇಶ


ನವದೆಹಲಿ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ತುರ್ತು ಪರಿಸ್ಥಿತಿ ಉಂಟಾಗಿದೆ. ನಿಲ್ದಾಣದ ಎತ್ತರದ ಬಳಿ ಉಪಗ್ರಹ ಛಿದ್ರವಾಗುವ ಬಗ್ಗೆ ನಾಸಾ ಎಚ್ಚರಿಕೆ ನೀಡಿದ್ದು, ತಕ್ಷಣವೇ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಬೋಯಿಂಗ್ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಮತ್ತು ಇತರ ವಾಪಸಾತಿ ವಾಹನಗಳಲ್ಲಿ ಆಶ್ರಯ ಪಡೆಯುವಂತೆ ಆದೇಶಿಸಲಾಗಿದೆ.


ಬಾಹ್ಯಾಕಾಶ ಅವಶೇಷಗಳು ಕಕ್ಷೆಯಲ್ಲಿರುವ ಪ್ರಯೋಗಾಲಯಕ್ಕೆ ಬುಧವಾರ ಬೆದರಿಕೆ ಹಾಕಿದ್ದರಿಂದ ತುರ್ತು ಆದೇಶವನ್ನು ಹೊರಡಿಸಲಾಗಿದೆ. ನಿಲ್ದಾಣದ ಸಮೀಪವಿರುವ ಎತ್ತರದಲ್ಲಿ ಉಪಗ್ರಹ ಮುರಿದುಹೋಗಿರುವ ಬಗ್ಗೆ ನಾಸಾಗೆ ತಿಳಿಸಿದಾಗ ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ, ಮಿಷನ್ ಕಂಟ್ರೋಲ್ ಎಲ್ಲಾ ಸಿಬ್ಬಂದಿ ಸದಸ್ಯರಿಗೆ ತಮ್ಮ ಗೊತ್ತುಪಡಿಸಿದ ಬಾಹ್ಯಾಕಾಶ ನೌಕೆಯಲ್ಲಿ ಆಶ್ರಯ ಪಡೆಯುವಂತೆ ನಿರ್ದೇಶಿಸಿದೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ದೈತ್ಯ ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಭಾರತ ಮೂಲದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಎಂಬ ಮತ್ತೊಬ್ಬ ಖಗೋಳ ವಿಜ್ಞಾನಿಯೊಂದಿಗೆ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದರು.‌

ಪೂರ್ವ ಯೋಜನೆಯಂತೆ ಅವರು ಜೂನ್ 14ರಂದು ಭೂಮಿಗೆ ಹಿಂದಿರುಗಬೇಕಿತ್ತು. ಆದರೆ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರ ವಾಪಸಾತಿಯನ್ನು ಜೂನ್ 26ಕ್ಕೆ ಮುಂದೂಡಲಾಗಿತ್ತು. ಆದರೆ ತಾಂತ್ರಿಕ ದೋಷಗಳು ಸರಿಹೋಗದ ಕಾರಣ ಜೊತೆಯಲ್ಲೇ ಮತ್ತಷ್ಟು ತಾಂತ್ರಿಕ ತೊಂದರೆಗಳು ಕಾಣಿಸಿಕೋಳ್ಳುತ್ತಿದ್ದು, ಅವರು ಭೂಮಿಗೆ ಹಿಂದಿರುಗುವುದು ಕಷ್ಟಕರವಾಗಿದೆ.

Previous Post Next Post