ವಿದ್ಯಾರ್ಥಿನಿಗೆ ಚೂರಿ ದಾಳಿ: ಪುತ್ತೂರು ಸುನ್ನೀ ಸಂಯುಕ್ತ ಜಮಾಅತ್ ಖಂಡನೆ

ವಿದ್ಯಾರ್ಥಿನಿಗೆ ಚೂರಿ ದಾಳಿ : ಪುತ್ತೂರು ಸುನ್ನೀ ಸಂಯುಕ್ತ ಜಮಾಅತ್ ಖಂಡನೆ

ಪುತ್ತೂರು: ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ  ಆವರಣದೊಳಗೆ ಹರಿತವಾದ  ಚೂರಿಯಿಂದ  ವಿದ್ಯಾರ್ಥಿನಿಗೆ, ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬನು ಇರಿದ ಘಟನೆ ನಡೆದಿದ್ದು ಇದನ್ನು ಪುತ್ತೂರು ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ತೀವ್ರವಾಗಿ ಖಂಡಿಸಿದೆ.

ಆರೋಪಿಯನ್ನು ಕೂಡಲೇ ಬಂಧಿಸಿ ಮಾದರಿ ಯೋಗ್ಯವಾದ ರೀತಿಯಲ್ಲಿ ಶಿಕ್ಷೆ ಕೊಡಬೇಕೆಂದು ಸಮಿತಿಯು ಆಗ್ರಹಿಸಿದೆ. 

ಶಿಕ್ಷಣ ಸಂಸ್ಥೆ ಯೊಳಗೆ ಆಯುಧ ತರುವುದು ಅಕ್ಷಮ್ಯ ಅಪರಾಧ, ಇದರ ಹಿಂದಿನ ಷಡ್ಯಂತ್ರ ಗಳನ್ನು ಬಯಲಿಗೆ ತರಬೇಕು.

  ಘಟನೆಯನ್ನು  ಶಿಕ್ಷಕಿಯೋರ್ವರು ಮರೆಮಾಚಲು ಪ್ರಯತ್ನಿಸಿದ್ದು ಕೂಡ ತನಿಖೆಯಾಗಬೇಕು . ಪೋಲೀಸ್ ಇಲಾಖೆಯು ಈ ಕೂಡಲೇ ಎಚ್ಚೆತ್ತು  ಕಾರ್ಯ ಪ್ರವೃತ್ತರಾಗಬೇಕೆಂದು ಸಂಯುಕ್ತ ಜಮಾಅತ್ ಅಧ್ಯಕ್ಷ ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಕೋಶಾಧಿಕಾರಿ ಯೂಸುಫ್ ಗೌಸಿಯ ಸಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Previous Post Next Post