ಅರಮನೆ ನಗರಿಯಲ್ಲಿ ನಾಳೆಯಿಂದ ವಿದ್ಯಾರ್ಥಿ ಸಂಗಮ

ಅರಮನೆ ನಗರಿಯಲ್ಲಿ ನಾಳೆಯಿಂದ ವಿದ್ಯಾರ್ಥಿ ಸಂಗಮ 
ಮೈಸೂರು: ಎಸ್ಸೆಸ್ಸೆಫ್ ಕರ್ನಾಟಕ ಆಯೋಜಿಸುವ ಕ್ಯಾಂಪಸ್ ಕಾನ್ಫರೆನ್ಸ್ ನಾಳೆಯಿಂದ (ಆಗಸ್ಟ್ 24) ಅರಮನೆ ನಗರಿ ಮೈಸೂರಿನಲ್ಲಿ ಆರಂಭವಾಗಲಿದೆ. ರಾಜ್ಯದ ವಿವಿಧ ಕ್ಯಾಂಪಸ್ ಗಳ ಐದು ಸಾವಿರ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿವಿಧ ವಿಶೇಷ ತರಬೇತುದಾರರಿಂದ ತರಗತಿಗಳು ನಡೆಯಲಿದ್ದು ಭಾನುವಾರ ಸಂಜೆ ಸಮಾರೋಪ ಗೊಳ್ಳಲಿದೆ. 

ಮೈಸೂರಿನ ಈದ್ಗಾ ಮೈದಾನದಲ್ಲಿ ಎರಡು ದಿನಗಳ ಕಾರ್ಯಕ್ರಮವು ಆಯೋಜಿಸಲಾಗಿದ್ದು, ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಸಾಂಘಿಕ ಸಾಮಾಜಿಕ ರಾಜಕೀಯ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ
Previous Post Next Post