ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡ ರಬೀಅ-24 ಮೀಲಾದ್ ಕಾನ್ಫರೆನ್ಸ್ ನಾಳೆ

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡ ರಬೀಅ-24 ಮೀಲಾದ್ ಕಾನ್ಫರೆನ್ಸ್ ನಾಳೆ
ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡ 'ಮುತ್ತು ನಬಿ ಮಾನವೀಯತೆ ಮಾರ್ಗದರ್ಶಿ' ಎಂಬ ಶೀರ್ಷಿಕೆಯಲ್ಲಿ ನಡೆಸಿ ಕೊಂಡು ಬರುವ ರಬೀಅ-24 ಮೀಲಾದ್ ಕಾನ್ಫರೆನ್ಸ್ ನಾಳೆ ಶುಕ್ರವಾರ (ಸೆಪ್ಟಂಬರ್  27 2024) ಮಸ್ಕತ್ ನ ಅಲ್ ಫಾಂ ಬಲ್ ರೂಮ್ ಝಾಕರ್ ಮಾಲ್ ಅಲ್ ಖುವೈರ್ ನಲ್ಲಿ  ನಡೆಯಲಿದೆ. 
ಕೆ ಸಿ ಎಫ್ ಒಮಾನ್ ಅಧ್ಯಕ್ಷರು ಅಯ್ಯೂಬ್ ಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾನ್ಫರೆನ್ಸ್ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರು ಡಿಪಿ ಯೂಸುಫ್ ಸಖಾಫಿ ಬೈತಾರ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎನ್ ಕೆಎಂ ಶಾಫಿ ಸಅದಿ ಬೆಂಗಳೂರು ಮತ್ತು ಅಂತರಾಷ್ಟ್ರೀಯ ಹಾಡುಗಾರ ನಬೀಲ್ ಬರಕಾತಿ ಬೆಂಗಳೂರು ಭಾಗವಹಿಸಲಿದ್ದಾರೆ. ಅಲೀ ಮುಸ್ಲಿಯಾರ್ ಬಹರೇನ್, ಅಬ್ದುಲ್ ಹಮೀದ್ ಈಶ್ವರಮಂಗಳ PMH ಆಹ್ವಾನಿತ ಅತಿಥಿಗಳಾಗಿರುತ್ತಾರೆ. ಕೆ ಸಿ ಎಫ್ ಒಮಾನ್ ಇದರ ವಿವಿಧ ಝೋನುಗಳ ಸಾವಿರದಷ್ಟು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕೆಸಿಎಫ್ ರಾಷ್ಟ್ರೀಯ ಸಮಿತಿ ತಿಳಿಸಿದೆ.
Previous Post Next Post