ಇಂದು ರಾಜ್ಯದಲ್ಲಿ ಕೊರೊನಾ ಭಾರಿ ಇಳಿಕೆ, 3604 ಪಾಸಿಟಿವ್, 7699 ಡಿಸ್ಚಾರ್ಜ್, ಇಂದಿನ ಪಾಸಿಟಿವಿಟಿ ದರ 2.18%

ಇಂದು ರಾಜ್ಯದಲ್ಲಿ ಕೊರೊನಾ ಭಾರಿ ಇಳಿಕೆ, 3604 ಪಾಸಿಟಿವ್, 7699 ಡಿಸ್ಚಾರ್ಜ್, ಇಂದಿನ ಪಾಸಿಟಿವಿಟಿ ದರ 2.18%ಬೆಂಗಳೂರು : ರಾಜ್ಯದಲ್ಲಿಂದು (ಜೂನ್ 27) ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ನೂರಕ್ಕಿಂತ ಕಡಿಮೆ ದಾಖಲಾಗಿದೆ. ಹಾಗೂ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಯಾಗಿದೆ.

ಇಂದು ಸಂಜೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 3604 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ. ಹಾಗೂ ಸೋಂಕಿನಿಂದ 89 ಜನರು ಸಾವನ್ನಪ್ಪಿದ್ದಾರೆ. ಇನ್ನು 7699 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,01,042 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 2.18 ರಷ್ಟು ಇದೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-7, ಬಳ್ಳಾರಿ-26, ಬೆಳಗಾವಿ-143, ಬೆಂಗಳೂರು ಗ್ರಾಮೀಣ-77, ಬೆಂಗಳೂರು ನಗರ-788, ಬೀದರ್-8, ಚಾಮರಾಜನಗರ-54, ಚಿಕ್ಕಬಳ್ಳಾಪುರ-40, ಚಿಕ್ಕಮಗಳೂರು-126, ಚಿತ್ರದುರ್ಗ-22, ದಕ್ಷಿಣ ಕನ್ನಡ-454, ದಾವಣಗೆರೆ-118, ಧಾರವಾಡ-46, ಗದಗ-18, ಹಾಸನ-322, ಹಾವೇರಿ-13, ಕಲಬುರಗಿ-36, ಕೊಡಗು-115, ಕೋಲಾರ-101, ಕೊಪ್ಪಳ-9, ಮಂಡ್ಯ-109, ಮೈಸೂರು-478, ರಾಯಚೂರು-19, ರಾಮನಗರ-15, ಶಿವಮೊಗ್ಗ-177, ತುಮಕೂರು-116, ಉಡುಪಿ-97, ಉತ್ತರ ಕನ್ನಡ-57, ವಿಜಯಪುರ-9, ಯಾದಗಿರಿ-4.


Visit our site CLIKC HERE


ಸೂಚನೆ- ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌'ಈಗಿನ ಸುದ್ದಿ'ಯ ಕಳಕಳಿ.

Previous Post Next Post