ಪ. ಬಂಗಾಳ ಸಿಎಂ ಮಮತಾ ಇಂದಿನಿಂದ ನಾಲ್ಕು ದಿನ ದೆಹಲಿಯಲ್ಲಿ, ರಾಷ್ಟ್ರ ರಾಜಕೀಯದತ್ತ ಮಮತ ಪ್ಲ್ಯಾನ್, ಬಿಜೆಪಿಯನ್ನು ಬದಿಗಿಡಲು ದೆಹಲಿಯಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ಕರೆದ ಮಮತಾ

ಪ. ಬಂಗಾಳ ಸಿಎಂ ಮಮತಾ ಇಂದಿನಿಂದ ನಾಲ್ಕು ದಿನ ದೆಹಲಿಯಲ್ಲಿ, ರಾಷ್ಟ್ರ ರಾಜಕೀಯದತ್ತ ಮಮತ ಪ್ಲ್ಯಾನ್, ಬಿಜೆಪಿಯನ್ನು ಬದಿಗಿಡಲು ದೆಹಲಿಯಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ಕರೆದ ಮಮತಾ 


ನವದೆಹಲಿ: ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕ್ರಮ ಕುರಿತು ಚರ್ಚಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ದೆಹಲಿಗೆ ತೆರಳಲಿದ್ದಾರೆ. ಇಂದು ಸಂಜೆ 5 ಗಂಟೆಗೆ ದೆಹಲಿಗೆ ಆಗಮಿಸಲಿರುವ ಮಮತಾ 28ಕ್ಕೆ ವಿರೋಧ ಪಕ್ಷದ ಪ್ರಮುಖ ನಾಯಕರ ಸಭೆ ಕರೆದಿದ್ದಾರೆ. 


ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಐತಿಹಾಸಿಕ ಸಾಧನೆ ಮಾಡಿರುವ ಮಮತಾ ಬ್ಯಾನರ್ಜಿ ಅವರ ಮುಂದಿನ ಗುರಿ ರಾಷ್ಟ್ರೀಯ ಮಟ್ಟದಲ್ಲಿರುವ ರಾಜಕೀಯ.  ಇದರ ಭಾಗವಾಗಿ ಅವರು ನಾಲ್ಕು ದಿನಗಳ ಕಾಲ ದೇಶದ ರಾಜಧಾನಿಯಲ್ಲಿ ಉಳಿಯಲಿದ್ದಾರೆ.


ಮಮತಾ ಬ್ಯಾನರ್ಜಿ ಅವರು ದೆಹಲಿಯಲ್ಲಿ ಶುಕ್ರವಾರದವರೆಗೆ ಇರಲಿದ್ದು, 2024 ರ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ನಾಯಕತ್ವಕ್ಕೆ ಏರುವ ರಾಜಕೀಯ ನಡೆಯಾಗಿದೆ ಮಮತಾರದ್ದು ಎಂದು ತಿಳಿದು ಬಂದಿದೆ.


ತಮ್ಮ ನಿವಾಸಕ್ಕೆ ಚಹಾ ಕೂಟಕ್ಕೆ ಬರುವಂತೆ ಮಮತಾಗೆ ಸೋನಿಯಾ ಆಹ್ವಾನ ನೀಡಿದ್ದಾರೆ. ಆ ಮೂಲಕ ಕಾಂಗ್ರೆಸ್ ಕೂಡ ಈಗಾಗಲೇ ಟಿಎಂಸಿಗೆ ಹತ್ತಿರವಾಗುವ ಸುಳಿವು ನೀಡಿದೆ ಎನ್ನಲಾಗಿದೆ.
Previous Post Next Post