ರೆಡ್, ಆರೆಂಜ್, ಎಲ್ಲೋ, ಗ್ರೀನ್ ಅಲರ್ಟ್ ಗಳನ್ನು ನಾವು ಕೇಳಿದ್ದೇವೆ. ಹಾಗಿದ್ದರೆ ಅಲರ್ಟ್ ಗಳನ್ನು ಯಾವಾಗ ಘೋಷಿಸಲಾಗುತ್ತದೆ? ಅದರ ಅರ್ಥವೇನು?? ಇಲ್ಲಿದೆ ಮಾಹಿತಿ

ರೆಡ್, ಆರೆಂಜ್, ಎಲ್ಲೋ, ಗ್ರೀನ್ ಅಲರ್ಟ್ ಗಳನ್ನು ನಾವು ಕೇಳಿದ್ದೇವೆ. ಹಾಗಿದ್ದರೆ ಅಲರ್ಟ್ ಗಳನ್ನು ಯಾವಾಗ ಘೋಷಿಸಲಾಗುತ್ತದೆ? ಅದರ ಅರ್ಥವೇನು?? ಇಲ್ಲಿದೆ ಮಾಹಿತಿ  




ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕಾಗಿದೆ. ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹವಾಮಾನ ಇಲಾಖೆ ಅಲರ್ಟ್ ಗಳನ್ನು ಘೋಷಿಸುವುದು ನಾವು ಕೇಳಿದ್ದೇವೆ. ಹಾಗಿದ್ದರೆ ಅಲರ್ಟ್ ಗಳು ಯಾವುದೆಲ್ಲ ??? ಇಲ್ಲಿದೆ ಮಾಹಿತಿ  


ಹವಾಮಾನ ಮುನ್ಸೂಚನೆಗೆ ಸಂಬಂಧಿಸಿದಂತೆ ಭಾರತೀಯ ಹವಾಮಾನ ಇಲಾಖೆ- IMD ನಾಲ್ಕು ರೀತಿಯಲ್ಲಿ ಅಲರ್ಟ್​ ಘೋಷಿಸುತ್ತೆ. ಗ್ರೀನ್​ ಅಲರ್ಟ್​, ಯೆಲ್ಲೋ ಅಲರ್ಟ್, ಆರೆಂಜ್ ಅಲರ್ಟ್​ ಮತ್ತು ರೆಡ್​ ಅಲರ್ಟ್​.


ಗ್ರೀನ್ ಅಲರ್ಟ್
ಗ್ರೀನ್ ಅಂದ್ರೆ 'ಆಲ್​ ಈಸ್​ ವೆಲ್' ಅಂತರ್ಥ​. ಅಂದ್ರೆ ಎಲ್ಲವೂ ನಾರ್ಮಲ್ ಆಗಿದೆ. ಯಾವುದೇ ಪ್ರತಿಕೂಲ ಹವಾಮಾನ ವೈಪರಿತ್ಯ ಇಲ್ಲ ಅಂತ.


ಯೆಲ್ಲೋ ಅಲರ್ಟ್
ಯೆಲ್ಲೋ ಅಲರ್ಟ್ ಅಂದ್ರೆ ಬಿ ಅವೇರ್ ಅಂತರ್ಥ. ಅಂದ್ರೆ ಎಚ್ಚರಿಕೆಯಿಂದಿರಿ, ಸನ್ನದ್ಧವಾಗಿರಿ ಅಂತ. ಹವಾಮಾನದಲ್ಲಿ ಬದಲಾವಣೆ ಆಗಿದೆ, 'ಹೆವಿ ಮಳೆ' ಬರೋ ಸಾಧ್ಯತೆ ಇದೆ ಅಂತ ಸ್ಥಳೀಯ ಆಡಳಿತಕ್ಕೆ ಅಲರ್ಟ್ ಮಾಡೋದು. ಹವಾಮಾನದಲ್ಲಾದ ಈ ಬದಲಾವಣೆ ಕೆಲವು ದಿನಗಳವರೆಗೆ ಮುಂದುವರಿಯಬಹುದು. ಜನಜೀವನ ಅಸ್ತವ್ಯಸ್ತವಾಗಬಹುದು. ಈ ಹಂತದಲ್ಲಿ 24 ಗಂಟೆಯಲ್ಲಿ 64.5ರಿಂದ 115.5 ಮಿಲಿ ಮೀಟರ್ ಮಳೆಯಾಗೋ ಸಾಧ್ಯತೆ ಇರುತ್ತೆ.


ಆರೆಂಜ್ ಅಲರ್ಟ್​
ಆರೆಂಜ್ ಅಲರ್ಟ್ ಅಂದ್ರೆ 'ಬಿ ಪ್ರಿಪೇರ್ಡ್​' ಅಂತ. ಅಂದ್ರೆ ಸಿದ್ಧವಾಗಿರಿ ಅಂತ. ತುಂಬಾ ಪ್ರತಿಕೂಲ ವಾತಾವರಣ ಇದ್ರೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸುತ್ತೆ. 'ವೆರಿ ಹೆವಿ ಮಳೆ' ಬರೋ ಸಾಧ್ಯತೆ ಇದ್ದು ಈ ಸಂದರ್ಭದಲ್ಲಿ ವಿದ್ಯುಚ್ಛಕ್ತಿ ಸಮಸ್ಯೆ ಆಗಬಹುದು, ರಸ್ತೆ ಮತ್ತು ರೈಲು ಸಂಪರ್ಕ ಕಡಿತಗೊಂಡು ಸಂವಹನ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ 24 ಗಂಟೆಯಲ್ಲಿ 115.6 ರಿಂದ 204.4 ಮಿಲಿ ಮೀಟರ್ ಮಳೆಯಾಗೋ ಸಾಧ್ಯತೆ ಇರುತ್ತೆ.


ರೆಡ್​ ಅಲರ್ಟ್
ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡೋ ಹೈಯೆಸ್ಟ್ ಅಲರ್ಟ್ ಅಂದ್ರೆ ಅದು ರೆಡ್​ ಅಲರ್ಟ್​. ರೆಡ್ ಅಲರ್ಟ್​ ಅಂದ್ರೆ ಟೇಕ್ ಆಯಕ್ಷನ್ ಅಂತ. ಅಂದ್ರೆ ಕ್ರಮ ಕೈಗೊಳ್ಳಿ ಅಂತ ಸ್ಥಳೀಯ ಆಡಳಿತಕ್ಕೆ ಸೂಚಿಸೋದು. 'ಎಕ್ಸೆಪ್ಷನಲಿ ಹೆವಿ ಮಳೆ' ಬರಲಿದ್ದು ವಾಹನ ಸಂಚಾರ, ವಿದ್ಯುಚ್ಛಕ್ತಿಗೆ ಹೆಚ್ಚಿನ ಸಮಸ್ಯೆ ಆಗಬಹುದು ಮತ್ತು ಸಾವು ಕೂಡ ಸಂಭವಿಸಬಹುದು ಅಂತ ಪಕ್ಕಾ ಆದ್ಮೇಲೆಯೇ ರೆಡ್​ ಅಲರ್ಟ್ ಘೋಷಿಸಲಾಗುತ್ತೆ. ಈ ಹಂತದಲ್ಲಿ 24 ಗಂಟೆಯಲ್ಲಿ 204.5 ಮಿಲಿ ಮೀಟರ್​ಗಿಂತ ಹೆಚ್ಚು ಮಳೆ ಬರೋ ಸಾಧ್ಯತೆ ಇದೆ.


Read More

Previous Post Next Post