ರಾಜ್ಯದಲ್ಲಿ ಕೊರೊನ ಇಳಿಕೆ: ಅರ್ಧ ಕರ್ನಾಟಕದಲ್ಲಿ ಹತ್ತಕ್ಕಿಂತ ಕಡಿಮೆ ಪಾಸಿಟಿವ್, ಇಂದು ರಾಜ್ಯದಲ್ಲಿ 1065 ಪಾಸಿಟಿವ್

ರಾಜ್ಯದಲ್ಲಿ ಕೊರೊನ ಇಳಿಕೆ: ಅರ್ಧ ಕರ್ನಾಟಕದಲ್ಲಿ ಹತ್ತಕ್ಕಿಂತ ಕಡಿಮೆ ಪಾಸಿಟಿವ್, ಇಂದು ರಾಜ್ಯದಲ್ಲಿ 1065 ಪಾಸಿಟಿವ್  



ಬೆಂಗಳೂರು : ರಾಜ್ಯದ ಜನರಿಗೆ ಸಂತಸದ ಸುದ್ದಿ ಎನ್ನುವಂತೆ ಇಂದು ಅರ್ಧ ಕರ್ನಾಟಕದ 15 ಜಿಲ್ಲೆಗಳಲ್ಲಿ 10ಕ್ಕೂ ಕಡಿಮೆ ಪ್ರಕರಣಗಳು ವರದಿಯಾಗಿವೆ. ಇಂದು ಹೊಸದಾಗಿ 1,065 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 28 ಮಂದಿ ಸಾವನ್ನಪ್ಪಿದ್ದಾರೆ.


ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬಾಗಲಕೋಟೆ 01, ಬಳ್ಳಾರಿ 03, ಬೆಂಗಳೂರು ಗ್ರಾಮಾಂತರ 10, ಬೀದರ್ 02, ಚಿಕ್ಕಬಳ್ಳಾಪುರ - 03, ದಾವಣಗೆರೆ 05, ಧಾರವಾಡ 07, ಗದಗ 0, ಹಾವೇರಿ - 01, ಕಲಬುರ್ಗಿ 06, ಕೊಪ್ಪಳ 0, ರಾಯಚೂರು 0, ರಾಮನಗರ 04, ವಿಜಯಪುರ 02 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 01 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಅರ್ಧ ಕರ್ನಾಟಕದ ಜಿಲ್ಲೆಗಳಲ್ಲಿ 10ಕ್ಕೂ ಕಡಿಮೆ ಪ್ರಕರಣಗಳು ದೃಢಪಟ್ಟಿವೆ ಎಂದು ತಿಳಿಸಿದೆ.


ಇನ್ನೂ ಬೆಂಗಳೂರು ನಗರದಲ್ಲಿ 270, ದಕ್ಷಿಣ ಕನ್ನಡ 284, ಹಾಸನ 54, ಕೊಡಗು 34, ಮೈಸೂರು 63, ಶಿವಮೊಗ್ಗ 45, ತುಮಕೂರು 31 ಮತ್ತು ಉಡುಪಿ ಜಿಲ್ಲೆಗಳ್ಲಲಿ 107 ಸೇರಿದಂತೆ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ 1,065 ಸೋಂಕಿತರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಇದರಿಂದಾಗಿ 29,30,529ಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇವರಲ್ಲಿ ಇಂದು 1486 ಸೇರಿದಂತೆ 28,71,448 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 22,048 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

Previous Post Next Post