ರಾಜ್ಯದಲ್ಲಿ ಇಂದು 1338 ಪಾಸಿಟಿವ್, 1947 ಗುಣಮುಖರು, ರಾಜ್ಯದಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳು 22,676

ರಾಜ್ಯದಲ್ಲಿ ಇಂದು 1338 ಪಾಸಿಟಿವ್, 1947 ಗುಣಮುಖರು, ರಾಜ್ಯದಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳು 22,676


ಬೆಂಗಳೂರು: ರಾಜ್ಯದಲ್ಲಿ ಸತತ ಎರಡು ದಿನಗಳಿಂದ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡಿದ್ದು, ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಚೇತರಿಕೆ ಕಂಡಿದೆ.


ಇಂದು (ಆ.10) ಸಂಜೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1338 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಹಾಗೂ ಸೋಂಕಿಗೆ 31 ಜನರು ಬಲಿಯಾಗಿದ್ದಾರೆ.


ವರದಿಗಳು ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 1947 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 22676 ಇದೆ. ಸೋಂಕಿನ ಖಚಿತ ಪ್ರಕಣಗಳ ಶೇಕಡಾವಾರು ಪ್ರಮಾಣ 1.05 % ಹಾಗೂ ಸೋಂಕಿನಿಂದ ಮೃತ ಪಟ್ಟವರ ಶೇಕಡಾವಾರು ಪ್ರಮಾಣ 2.31 % ಇದೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-1, ಬಳ್ಳಾರಿ-3, ಬೆಳಗಾವಿ-21, ಬೆಂಗಳೂರ ಗ್ರಾಮಾಂತರ-11, ಬೆಂಗಳೂರು ನಗರ-315, ಬೀದರ್-5, ಚಾಮರಾಜನಗರ-18, ಚಿಕ್ಕಬಳ್ಳಾಪುರ-6, ಚಿಕ್ಕಮಗಳೂರು-93, ಚಿತ್ರದುರ್ಗ-12, ದಕ್ಷಿಣ ಕನ್ನಡ-378, ದಾವಣಗೆರೆ-7, ಧಾರವಾಡ-16, ಗದಗ-0, ಹಾಸನ-47, ಹಾವೇರಿ-5, ಕಲಬುರಗಿ-5, ಕೊಡಗು-50, ಕೋಲಾರ-16, ಕೊಪ್ಪಳ-3, ಮಂಡ್ಯ-26, ಮೈಸೂರು-71, ರಾಯಚೂರು-1, ರಾಮನಗರ-6, ಶಿವಮೊಗ್ಗ-48, ತುಮಕೂರು-18, ಉಡುಪಿ-92, ಉತ್ತರ ಕನ್ನಡ-61, ವಿಜಯಪುರ-3, ಯಾದಗಿರಿ-0.


ಕೇರಳದಲ್ಲಿ ಇಂದು 21,119 ಪಾಸಿಟಿವ್, 18,493 ಗುಣಮುಖರು


ಕೇರಳದಲ್ಲಿ ಇಂದು 21,119 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,32,769 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 15.91% ಇದೆ. ಚಿಕಿತ್ಸೆಯಲ್ಲಿದ್ದ 18,493 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇನ್ನು ರಾಜ್ಯದಲ್ಲಿ 1,71,985 ಸಕ್ರಿಯ ಪ್ರಕರಣಗಳು ಇವೆ.

Previous Post Next Post