ದಕ್ಷಿಣ ಕನ್ನಡದಲ್ಲಿ ಇಂದು ಕೊರೊನ ಅತೀ ಹೆಚ್ಚು 422, ಬೀದರ್ ಗದಗದಲ್ಲಿ ಶೂನ್ಯ
ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳವಾಗಿದೆ. ಇಂದು ಹೊಸದಾಗಿ 1826 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 29,22,875 ಕ್ಕೆ ಏರಿಕೆಯಾಗಿದೆ.
1618 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 28,63,117 ಜನ ಗುಣಮುಖರಾಗಿದ್ದಾರೆ. ಇವತ್ತು 33 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 36,881 ಜನ ಸಾವನ್ನಪ್ಪಿದ್ದಾರೆ. 22,851 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 1.09 ರಷ್ಟು ಇದೆ. ಇವತ್ತು 1,67,237 ಪರೀಕ್ಷೆ ನಡೆಸಲಾಗಿದೆ.
ಜಿಲ್ಲಾವಾರು ಮಾಹಿತಿ:
ಬಾಗಲಕೋಟೆ 3, ಬೀದರ್ 0, ಚಿಕ್ಕಬಳ್ಳಾಪುರ 7, ಗದಗ 0, ಹಾವೇರಿ 5, ಕಲಬುರ್ಗಿ 4, ಕೊಪ್ಪಳ 4, ರಾಯಚೂರು 2, ರಾಮನಗರ 6, ವಿಜಯಪುರ 2, ಯಾದಗಿರಿ 3. ಬೆಂಗಳೂರು ನಗರ 377, ದಕ್ಷಿಣಕನ್ನಡ 422, ಹಾಸನ 175, ಕೊಡಗು 71, ಮೈಸೂರು 118, ತುಮಕೂರು 88, ಉಡುಪಿ 130, ಉತ್ತರಕನ್ನಡ 79 ಜನರಿಗೆ ಸೋಂಕು ತಗುಲಿದೆ.