ನನ್ನ ಈ ದಿನದ ಸಂದೇಶ
INDIA's 75th Independence Day
ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಭವ್ಯ ಭಾರತ ಬ್ರಿಟಿಷರ ಕರಾಳ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿದ ದಿನ. ಇನ್ನೂರು ವರ್ಷಗಳ ಕಾಲ ದೇಶವನ್ನಾಳಿದ ಬ್ರಿಟಿಷರು ಭಾರತೀಯ ಯೋಧರ ಕೆಚ್ಚೆದೆಯ ಹೋರಾಟಕ್ಕೆ ಮಣಿದು ಗಂಟು ಮೂಟೆ ಕಟ್ಟಿಕೊಂಡು ದೇಶ ಬಿಟ್ಟು ತೆರಳಿದ ದಿನ.
ಜಾತಿ ಮತ ಭೇದವಿಲ್ಲದೆ ಎಲ್ಲರೂ ದೇಶಕ್ಕಾಗಿ ಹೋರಾಡಿ ಸ್ವತಂತ್ರವನ್ನು ನಮ್ಮ ಕೈಗಿತ್ತರು. ಆ ಸ್ವಾತಂತ್ರ್ಯವನ್ನು ಸದುಪಯೋಗಪಡಿಸುವಲ್ಲಿ ನಾವು ವಿಫಲರಾಗಿದ್ದೇವೊ ಏನೋ?
ಮಹಾತ್ಮಾ ಗಾಂಧೀಜಿಯವರು ಹೇಳುತ್ತಾರೆ ಹೆಣ್ಣೊಬ್ಬಳು ಮಧ್ಯರಾತ್ರಿ ಒಂಟಿಯಾಗಿ ಸಾಗಿ ಸುರಕ್ಷಿತವಾಗಿ ಮನೆಗೆ ತಲುಪಿದ್ದಲ್ಲಿ ದೇಶವು ಸ್ವತಂತ್ರವಾಗಿದೆ ಎನ್ನಬಹುದು. ಈ ಪರಿಸ್ಥಿತಿಯಲ್ಲಿ ಅದು ಎಷ್ಟು ಸಾಧ್ಯ ಎಂಬುವುದು ನಾವು ತಿಳಿದುಕೊಳ್ಳಬೇಕಾಗಿದೆ.
ಭಾರತವು ಬ್ರಿಟಿಷರಿಂದ ಸ್ವತಂತ್ರ್ಯಗೊಂಡಿದ್ದು ಹೌದು ಆದರೆ ಅರೆಹೊಟ್ಟೆ, ನಿರುದ್ಯೋಗ, ಅಕ್ರಮ ಅನಾಚಾರಗಳು, ಕೊಲೆ ದರೋಡೆಗಳು, ಭಯೋತ್ಪಾದನಾ ಕೃತ್ಯಗಳ ಕಪಿಮುಷ್ಟಿಯಲ್ಲಿ ಇಂದು ದೇಶವು ಸಿಲುಕಿಕೊಂಡಿದೆ. ಕೋಮುವಾದಿಗಳ ಅಟ್ಟಹಾಸವು ದೇಶದಲ್ಲಿ ಮೆರೆದಾಡುತ್ತಿದೆ. ಇದೆಲ್ಲದ್ದರಿಂದ ದೇಶವು ಮುಕ್ತಿ ಹೊಂದ ಬೇಕಾಗಿದೆ. ಆಗ ಭಾರತವು ಸಂಪೂರ್ಣವಾಗಿ ಸ್ವತಂತ್ರವಾಗುವುದು. ಅದು ಅಸಾಧ್ಯವೆಂದಲ್ಲ, ಪ್ರತಿಯೊಬ್ಬ ಭಾರತೀಯನು ಮನಸ್ಸು ಮಾಡಿದರೆ ಸುಲಭ ಸಾಧ್ಯ.
ಕೋಮುವಾದಿಗಳು ದೇಶಕ್ಕೆ ಆಪತ್ತು. ಕೋಮುಗಲಭೆಗೆ ಪ್ರಚೋದನೆ ಕೊಟ್ಟು ಕೋಮು ಭಾಷಣ ಮಾಡುವ ಕೋಮುವಾದಿಗಳನ್ನು ದೂರವಿಡೋಣ, ಅವರನ್ನು ಮಟ್ಟ ಹಾಕಿ ಅವರ ಮಸಣದ ಮೇಲೆ ಸುಂದರವಾದ ಸೌಹಾರ್ದ ಭಾರತವೊಂದನ್ನು ಕಟ್ಟೋಣ.
ಸೌಹಾರ್ದ ಭಾರತ ನಮ್ಮದಾಗಲಿ, ಜಾತ್ಯತೀತ ಭಾರತವು ನಮ್ಮದಾಗಲಿ, ಪ್ರಜಾ ಭಾರತವು ಉಳಿಯಲಿ, ಅದಕ್ಕಾಗಿ ಪ್ರಯತ್ನಿಸೋಣ, ಹೋರಾಡೋಣ, ಎಲ್ಲರಿಗೂ ಸುಂದರವಾದ ಭಾರತದ ಎಪ್ಪತ್ತೈದನೆ ವಾರ್ಷಿಕ ಸ್ವಾತಂತ್ರ್ಯೋತ್ಸವದ ಶುಭಾಶಯಗಳು
__________________________________
ಎಮ್ಮೆಸ್ಸೆಂ ಜುನೈದ್ ಹಿಮಮಿ ಸಖಾಫಿ (ಸದಸ್ಯರು SSF ರಾಜ್ಯ ಸಮಿತಿ)
posted date 15/08/21 >ಚಿತ್ರದುರ್ಗ 6.46am